ಭಾಗ್ಯಕ್ಕ
ಭಾನುವಾರದ ಸಂಜೆ, ಮನೆಯಲ್ಲಿ ಒಂದು ಮೆದುವಾದ ವಾತಾವರಣ. ಮಧ್ಯಾಹ್ನ ಅಮ್ಮ ಮಾಡಿದ ಅಡಿಗೆ ತಿಂದ ಮಲಗಿ ಎದ್ದ ಮನೆಯವರಿಗೆ, ಇನ್ನು ಮಲಗಿದ್ದ ನಾಯಿ ಮೋತಿಯ ತರಹ ಸೋಂಬೆರಿತನ ಮೈಗೂಡಿತ್ತು. ಮೋತಿಯ ಪಕ್ಕ ಕೂತು ಅದರ ತಲೆ ಸವರುತ್ತ, ಟಿ.ವಿ. ಚಾನೆಲ್ ಚೇಂಜ್ ಮಾಡ್ತಾ ಇದ್ದ ವರ್ಷಾಳ ಆಕಳಿಕೆ ಇನ್ನು ಮುಗಿದಿರಲಿಲ್ಲ. ಆಗಲೆ ಅಮ್ಮ ಅಡುಗೆಮನೆಯಲ್ಲಿ ಕಾಫಿ ತಿಂಡಿಯ ತಯಾರಿ ಶುರು ಮಾಡಿದ ಕಟಪಟ ಕೇಳ್ತಾ ಇತ್ತು, ಅವರಿಗೆ ವರ್ಷಳ ದೊಡ್ಡಕ್ಕ ಭಾಗ್ಯ ಸಹಾಯ ಮಾಡ್ತಾ ಇದ್ರು. ಹೊರಗಡೆ ವರಾಂಡದಲ್ಲಿ ಆರಾಮ್ ಕುರ್ಚಿಯ ಮೇಲೆ ಅವಳ ಭಾವ ಪೇಪರ್ ಹಿಡಿದು ಕೂತಿದ್ದರು. ಅವಳಪ್ಪ ಸಾಮಾನು ತರಲು ಹೊರ ಹೋಗಿದ್ದರು.
ವರ್ಷ ಆಕಳಿಸತ್ತಲೆ ಚಾನೆಲ್ ಬದಲಿಸುವಾಗ ಅವಳಕ್ಕ ಅಂದರು "ಬಾರೆ, ನಿಂಗೆ ತಲೆ ಬಾಚಿ ಕೊಡ್ತೀನಿ, ಇನ್ನು ಮಾರಮ್ಮನ ಹಾಗೆ ಕೂದಲು ಬಿಟ್ಕೊಂಡಿದ್ದೀಯಾ. ಅಪ್ಪ ನೋಡಿದ್ರೆ ಮತ್ತೆ ಬೈಸ್ಕೊತ್ತೀಯಾ ನೀನು."
"ಅಯ್ಯೋ ಹೋಗಕ್ಕ, ಹೊಟ್ಟೆಗೆ ಹಿಟ್ಟು ಬಿದ್ದ ಹೊರೆತು ನಾನು ಈ ಜಾಗದಿಂದ ಏಳಲ್ಲ"
"ಅಬ್ಬ, ಬಕಾಸುರಿಯಾಗಿದ್ದೀಯಾ ಕಣೆ, ಮಧ್ಯಾಹ್ನ ಆ ರೀತಿ ತಿಂದು, ಮತ್ತೆ ತಿಂಡಿ ಬೇಕು ಅಂತೀಯಾ"
"ಅರೆ, ಬೆಳೆಯೊ ಮಕ್ಕಳಿಗೆ ಹೊಟ್ಟೆ ತುಂಬ ತಿನ್ನಿಸಬೇಕು ಅಂತಾರೆ, ತಿಂದಿದ್ದನ್ನು ಲೆಕ್ಕ ಮಾಡ ಬೇಡ್ವೆ, ನಂಗೆ ದೃಷ್ಟಿಯಾಗುತ್ತೆ."
"ವಾಚಾಳಿ, ಎಲ್ಲಾದಕ್ಕೂ ಒಂದು ಉತ್ತರ ಇರುತ್ತೆ ನಿನ್ನ ಹತ್ರ..."
ಅಕ್ಕ ತಂಗಿಯ ಈ ಜಟಾಪಟಿಯ ಮಧ್ಯೆ ಚಾನೆಲ್ ತಿರಿಗಿಸುವುದು ನಿಂತಿರಲಿಲ್ಲ. ಅವಳ ಅಕ್ಕ ಇನ್ನೂ ಏನನ್ನೊ ಹೇಳಬೇಕೆಂದಿದ್ದಳು ಅಷ್ಟರಲ್ಲಿ ಟಿ.ವಿ ಕಡೆ ನೋಡಿ, ದೊಡ್ಡ ದ್ವನಿಯಲ್ಲಿ ಅಂದಳು "ಇರೆ, ವಾಪಸ್ ಹೋಗೆ, ರಾಜ್ ಕುಮಾರ್ ರವರ "ಭಾಗ್ಯವಂತರು" ಸಿನಿಮಾ ಬರ್ತಾ ಇದೆ"
"ಅಯ್ಯೋ ಅಕ್ಕ ಆ ಮೂವಿ ಎಷ್ಟು ಸಾರಿ ನೋಡ್ತೀಯೇ?"
"ಸುಮ್ನಿರೆ, ಒಳ್ಳೆ ಸಿನಿಮಾನ ಎಷ್ಟು ಸಾರಿ ನೋಡಿದ್ರು ಬೇಜಾರಾಗೊಲ್ಲ. ಚಾನೆಲ್ ತಿರುಗಿಸಬೇಡ, ಈಗ ಬಂದು ಬಿಡ್ತೀನಿ"
"ಸರಿ ಮಾರಾಯ್ತಿ..... ಅಮ್ಮ, ಅಕ್ಕಂಗೆ ಒಂದು ದೊಡ್ಡ ಟವಲ್ ಕೊಡು ಮತ್ತೆ, ಸಿನಿಮಾದಲ್ಲಿನ ಪಾತ್ರಗಳಿಗಿಂತ ಇವಳು ಅಳುವುದೆ ಜಾಸ್ತಿ ಯಾವಾಗ್ಲು"
ಸಿನಿಮಾ ನೋಡಿ ಭಾಗ್ಯ ಅಳುವುದು ಮನೆಯಲ್ಲಿ ಹಳೆ ಜೋಕಾಗಿತ್ತು. ಅದನ್ನು ಎಲ್ಲಾರು ಹೇಳಿ ಹೇಳಿ ಈಗ ಅದಕ್ಕೆ ಜನ ಪ್ರತಿಕ್ರಿಯಿಸುವುದನ್ನು ಬಿಟ್ಟಿದ್ದರು. ಭಾಗ್ಯಳಂತು ಮೊದಲಿಂದಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಅಂತು ದೊಡ್ಡಕ್ಕ ಅಳುವುದು ಗ್ಯಾರಂಟಿ ಅಂತ ಗೊತ್ತಾದ ಮೇಲೆ ವರ್ಷ ನಡುಮನೆಯಿಂದ ವರಾಂಡಕ್ಕೆ ಬಂದು ಮೆಟ್ಟಿಲ ಮೇಲೆ ಕೂತಳು. ದೊಡ್ಡಕ್ಕನ ಸೆಂಟಿಮೆಂಟಿಗೆ ಹೆದರಿ ಮೋತಿ ಕೂಡ ಇವಳ ಹಿಂದೆ ಹೊರಬಂದು ಮತ್ತೆ ಇವಳ ಕಾಲ ಬಳಿ ಮಲಗಿತು.
ಆರಾಮ್ ಕುರ್ಚಿಯ ಮೇಲೆ ಆರಾಮಾಗಿ ಕೂತು ಪೇಪರ್ ಓದುತ್ತಿದ್ದ ಭಾವನನ್ನು ನೋಡಿ ವರ್ಷಾಳ ಮನದಲ್ಲಿ ಒಂದು ತರಲೆ ಪ್ರಶ್ನೆ ಎದ್ದಿತು.
"ಭಾವ, ಒಂದು ಪ್ರಶ್ನೆ ಕೇಳ್ಲಾ"
ಅವಳ ಭಾವ ಪ್ರಕಾಶ್ ಪೇಪರ್ ಇಳಿಸದೆ ಹಾಗೆ "ಹೂಂ" ಅಂದರು.
ಒಮ್ಮೆ ಹಿಂತಿರುಗಿ ಅಕ್ಕಳನ್ನು ನೋಡಿ ವರ್ಷಾ ಅಂದಳು "ನಿಜವಾಗಿಯು ಭಾವ ಅದು ಹೇಗೆ ನೀವು ಅಕ್ಕಳನ್ನು tolerate ಮಾಡ್ತೀರಾ ಅಂತ?"
ಪೇಪರ್ ಇಳಿಸಿ, ಅವರ ಕನ್ನಡಕದ ಮೂಲಕಾನೆ ವರ್ಷಾಳನ್ನು ನೋಡಿ ಅವಳ ಭಾವ ಅಂದರು "tolerate ಅಂದರೆ ಏನರ್ಥ??"
"ಅಷ್ಟು ಅರ್ಥವಾಗಿಲ್ವ" ಅನ್ನೊ ಒಂದು ಮುಖಭಾವದಲ್ಲಿ ಭಾವನನ್ನು ನೋಡುತ್ತಾ ವರ್ಷಾ ಅಂದಳು "ಅವಳನ್ನು ಒಳ ಹೋಗಿ ನೋಡಿ, ಖುಷಿಯಿಂದ ಅಳ್ತಾಳೊ, ದುಃಖದಿಂದ ಅಳ್ತಾಳೊ ಗೊತ್ತಾಗ್ತಾ ಇಲ್ಲ. ಆ ಕ್ಯಾರೆಟರ್ಸ್‍ಗಿಂತ ಇವಳ torture ತಡಿಯೋಕೆ ಆಗೊಲ್ಲ. ಇವತ್ತು ಸಿನಿಮಾ ಮುಗಿಯೊದರೊಳಗೆ ಇಡಿ ಟವಲ್ ವದ್ದೆ ಮಾಡಿರ್ತಾಳೆ ನೋಡಿ ಬೇಕಾದ್ರೆ"
ವರ್ಷಾಳ ಮಾತು ಕೇಳಿ ಪ್ರಕಾಶ್‍ಗೆ ನಗು ತಡೆಯಲಾಗಲಿಲ್ಲ.
ಜೋರಾಗಿ ನಗುತ್ತಾ, ಪೇಪರ್ ಮಡಚಿ ಅಂದರು "ಅದು ನಂಗೂ ಗೊತ್ತು ವರ್ಷಾ, ಆದರು ನೀನು ಮೊದಲು ಕೇಳಿದ ಪ್ರಶ್ನೆ ನನಗೆ ಇನ್ನು ಅರ್ಥವಾಗಿಲ್ಲ"
ಜೋರಾಗಿ ನಗುತ್ತಾ, ಪೇಪರ್ ಮಡಚಿ ಅಂದರು "ಅದು ನಂಗೂ ಗೊತ್ತು ವರ್ಷಾ, ಆದರು ನೀನು ಮೊದಲು ಕೇಳಿದ ಪ್ರಶ್ನೆ ನನಗೆ ಇನ್ನು ಅರ್ಥವಾಗಿಲ್ಲ"
"ಅಲ್ಲ ಭಾವ ನಿಮ್ಗೆ ಅವಳ ಜೊತೆ ತಲೆ ನೋವು ಬರೊಲ್ವ?"
"ಅವಳಿಂದಾನಾ? ನಂಗಾ? ಇಲ್ಲವಲ್ಲ."
"ಹಾಗಾದ್ರೆ ನೀವು ಗ್ರೇಟ್ ಭಾವ" ಅವಳ ಧ್ವನಿಯಲ್ಲಿ ತುಳುಕುತ್ತಿದ್ದ ವ್ಯಂಗ್ಯವನ್ನು ಗುರುತಿಸಿ ಮತ್ತೆ ನಗು ಅರಳಿತು ಅವರ ಮುಖದ ಮೇಲೆ.
ಸ್ವಲ್ಪ ಹೊತ್ತು ಯೋಚಿಸಿದ ಮೇಲೆ ಮತ್ತೆ ಅಂದರೆ "ನಾನು ನಿಂಗೆ ಅರ್ಥವಾಗೊ ಹಾಗೆ ಹೇಳ್ತೀನಿ ಇರು."
ಸ್ವಲ್ಪ ಹೊತ್ತು ಯೋಚಿಸಿದ ಮೇಲೆ ಮತ್ತೆ ಅಂದರೆ "ನಾನು ನಿಂಗೆ ಅರ್ಥವಾಗೊ ಹಾಗೆ ಹೇಳ್ತೀನಿ ಇರು."
ಕಥೆ ಕೇಳುವ ಎಲ್ಲಾ ಕುತೂಹಲವನ್ನು ಅವಳ ಕಣ್ಣಲ್ಲಿ ತುಂಬಿಕೊಂಡು ಗಲ್ಲಕ್ಕೆ ಕೈಯೂರಿ ಕೂತಳು ವರ್ಷಾ. ಅವಳ ಬದಲಾದ ಭಂಗಿಗೆ ನಾಯಿ ಮೋತಿಯ ಕಿವಿಯು ನಿಮಿರಿತು.
"ನಾನು ಒಬ್ಬ ಸರ್ಕಾರಿ ಉದ್ಯೋಗಿ ವರ್ಷಾ, ದಿನವೆಲ್ಲ ಜನರ ಸಂತೆ ಆಫೀಸಿನಲ್ಲಿ. ಅಲ್ಲಿ ಬರೊ, ಕೆಲಸ ಮಾಡೊ, ಒಡನಾಡೊ ಹೆಚ್ಚಿನ ಜನರು ಒಳಗೊಂದು ಹೊರಗೊಂದು ಇರ್ತಾರೆ. ಅಂದರೆ hypocrites ಆಗಿರ್ತಾರೆ. ಅಂತಾ ಒಂದು ಸುಳ್ಳಿನ ವಾತಾವರಣದಿಂದ ಮನೆಗೆ ಬಂದ ತಕ್ಷಣ ಇವಳ ಮುಖ ನೋಡ್ತೀನಿ, ಒಂದು ತರಹ ತಂಗಾಳಿ ಸೋಕಿದ ಹಾಗಾಗುತ್ತೆ. ನೀವುಗಳು ಹೇಳ್ತೀರಲ್ಲ "breath of fresh air" ಹಾಗೆ. ಅವಳ ಮನಸ್ಸಿನಲ್ಲಿ ಏನಿರುತ್ತೊ ಅದೆ ಅವಳ ಮುಖದಲ್ಲಿ ಇರುತ್ತೆ, ಮಾತಿನಲ್ಲಿರುತ್ತೆ. ಮುಚ್ಚುಮರೆ ಇಲ್ಲ ಅವಳಲ್ಲಿ. ಸಿನಿಮಾ ನೋಡಿ ಅಳ್ತಾಳೆ ಹೌದು ಆದರೆ ಕಣ್ಣಿರು ಹಾಕಿ ತನಗೆ ಈ ಭಾವಗಳು ತಟ್ಟೊಲ್ಲ ಅನ್ನೊರಗಿಂತ ಮೇಲು, ಸಿಟ್ಟು ಬಂದಾಗ ಗಟ್ಟಲು ಹರಿದುಕೊಂಡು ಕೂಗ್ತಾಳೆ, ಆದರೆ ಸಿಟ್ಟನ್ನು ಅಸ್ತ್ರವನ್ನಾಗಿಸಿ ಮುಂದೆ ಯಾವುದು ಜಗಳದಲ್ಲಿ ಉಪಯೋಗಿಸೊಲ್ಲ ಬೇರೆಯವರನ್ನು ನೋಯಿಸಲು. ತನ್ನ ಮನಸ್ಸಿನಲ್ಲಿರೋದನ್ನು ಮುಕ್ತವಾಗಿ, ಹಿಂಜರಿಕೆಯಿಲ್ಲದೆ ಹೇಳಿ ಬಿಡ್ತಾಳೆ. ನಿನ್ನ ಪ್ರಶ್ನೆಗೆ ಉತ್ತರ ಸಿಕ್ತಾ?"
ಸ್ವಾರಸ್ಯಕರ ಕಥೆ ಕೇಳುತ್ತಿರುವ ಮುಖಭಾವ ಅವಳಲ್ಲಿ ಆದರು ಕಣ್ಣಲ್ಲಿ ಒಂದು ಪುಟ್ಟ ಅನುಮಾನ, ಇಷ್ಟು ಮಾತಾಡಿದ ಮೇಲೆ ಅದನ್ನು ಕೇಳಿಯೇ ಬಿಡೋಣ ಅನ್ನೊ ತರಹ ಕೇಳಿದಳು "ಅವಳ ಅಳು, ಅವಳ ಸಿಟ್ಟು ನಿಮಗೆ ಇಷ್ಟವಾಗುತ್ತೆ ಅಂದರೆ ನಂಬೋದು ಸ್ವಲ್ಪ ಕಷ್ಟ ಭಾವ. ಅಂದರೆ ನೀವು ಇಷ್ಟು ಸಾಫ್ಟ್, ಮೆದುವಾಗಿ ಮಾತಾಡ್ತೀರಿ. ಮತ್ತೆ.........???"
ಪ್ರಕಾಶ್‍ಗೆ ತನ್ನ ಮತ್ತೆ ತನ್ನ ಪುಟ್ಟ ನಾದನಿಯ ಮಧ್ಯದ ಅಂತರ ಅರ್ಥವಾಯಿತು, ತಾನು ಹೇಳಿದ ಮಾತುಗಳನ್ನು ಮಾತ್ರ ಅರ್ಥ ಮಾಡಿಕೊಂಡವಳು, ಹಿಂದಿನ ಹೇಳದೆ ಇದ್ದ ಮಾತುಗಳನ್ನು ಅರಿಯಲು ಬೇಕಾದ ಪ್ರಭುದ್ಧತೆ ಅವಳಲ್ಲಿ ಇನ್ನು ಬಂದಿಲ್ಲ ಅಂತ ತಿಳಿದು ಮತ್ತೆ ಹೇಳಿದ
"ಅಯ್ಯೋ ಹುಚ್ಚಿ, ಅದಿಷ್ಟೆ ಇಷ್ಟಾ ಅಂತ ಹೇಳಲಿಲ್ವ ನಾನು. ಅವಳ ಅಳು, ಸಿಟ್ಟು ಎಷ್ಟು ಸ್ಪೋಟಕನೊ ಅವಳ ಪ್ರೀತಿನೂ ಹಾಗೆ ಕಣೆ. ನೋಡು ನಿನ್ನ ಅಕ್ಕ ಮತ್ತೆ ನಿನ್ನ ಮಧ್ಯ ಸುಮಾರು ೭ ವರ್ಷದ ಅಂತರವಿದೆ ಮತ್ತೆ ನನ್ನ ಮತ್ತೆ ಅವಳ ಮಧ್ಯ ಸುಮಾರು ೯ ವರ್ಷದ ಅಂತರವಿದೆ. ಅಂದರೆ ಸರಿಯಾಗಿ ನೋಡಿದರೆ ನಾನು ನಿಮ್ಮಪ್ಪ ಶತಮಾನದ ಕೊನೆಯವನು ಮತ್ತೆ ನಿಮ್ಮಕ್ಕ ನಿನ್ನ ಶತಮಾನದ ಮೊದಲಿನವಳು. ನಾನು ಹೇಳೋಕೆ ಹೊರೆಟಿದ್ದು ಏನೆಂದರೆ, ಅವಳ ಈ ಚಡಪಡಿಕೆ, ಸಿಟ್ಟು, ನಗು, ಅಳು, ರೋಮಾಂಚನ, ಎಲ್ಲಾ ನನ್ನನ್ನು ಬೇಗ ಮುದುಕನಾಗಲು ಬಿಡುವುದಿಲ್ಲ. ಮತ್ತೆ ಅವಳಲ್ಲಿನ ಮುಕ್ತ ವ್ಯವಹಾರ ನನಗೆ ನನ್ನಲ್ಲಿ ಒಂದು ನಂಬಿಕೆ ಹುಟ್ಟಿಸುತ್ತೆ. ಈಗನ ಕಾಲದಲ್ಲಿ ಎಲ್ಲಾದು ಅತಿ ವೇಗ ಗತಿಯಲ್ಲಿ ನೆಡೆಯುತ್ತೆ, ಸಂಬಂಧಗಳಲ್ಲಿ ಕೂಡ ವೇಗ ಬಂದಿದೆ ಈಗ, ನಿಮ್ಮ ಜನರೇಶನವರಿಗೆ ಪ್ರೀತಿಯಾಗಿದಿಯೊ ಇಲ್ಲವೊ ಅನ್ನೊದು ತಿಳಿಯೋಕೆ ಒಂದು ಅನುಮಾನ, ಆ ಪ್ರೀತಿ ಮದುವೆಯಷ್ಟು ಗಂಭೀರವೊ ಅಂತ ತಿಳಿಯೋಕೆ ಇನ್ನೊಂದು ಕನ್‍ಫ್ಯೂಶನ್. ಆದರೆ ಇವಳಲ್ಲಿ ಈ ನೂರೆಂಟು ಕನ್‍ಫ್ಯೂಶನ್‍ಗಳಿಲ್ಲ. ಅವಳು ಪ್ರೀತಿಸ್ತೀನಿ ಅಂದ್ರೆ ನಿಂಗೆ ಗೊತ್ತಾಗುತ್ತೆ ಅವಳಿಗೆ ಅದರಲ್ಲಿ ಒಂದು ಗುಲಗಂಜಿಯಷ್ಟು ಅನುಮಾನವಿಲ್ಲ ಅಂತ. ಆ ತರಹದ ಒಂದು ವ್ಯಕ್ತಿ ಮುಕ್ತವಾಗಿ ತನ್ನ ಭಾವನೆಗಳನ್ನು ತೋರಿದಾಗ ನನಗೆ ನನ್ನಲ್ಲಿ, ಅವಳ ಬಗ್ಗೆ ಇರುವ ನನ್ನ ಪ್ರೀತಿಯಲ್ಲಿ ಒಂದು ದೃಢವಾದ ನಂಬಿಕೆ ಬರುತ್ತೆ. ಆ ನಂಬಿಕೆನೆ ನನ್ನ ಎಲ್ಲಾ ಖುಷಿಗಳಿಗೆ ಅಡಿಪಾಯ. ಮತ್ತೆ ತಂಗಿಯಾಗಿ ನೀನು ಗಮನಿಸಿಯೆ ಇರ್ತೀಯಾ, ಇಷ್ಟೆಲ್ಲಾ ಮುಕ್ತವಾಗಿ ವ್ಯವಹರಿಸುವ ನಿಮ್ಮಕ್ಕ ಬೇರೆಯವರಿಗೆ ಘಾಸಿ ಮಾಡಲು ಯಾವಾಗಲು ಇಷ್ಟ ಪಡುವುದಿಲ್ಲ. ಅವಳ ಯಾವುದೆ ಮಾತು ಬೇರೆಯವರಿಗೆ ನೋವಾಗಬಹುದು ಅಂತ ಅನಿಸಿದ್ರೆ ಅವಳು ಅದನ್ನು ವ್ಯಕ್ತ ಪಡಿಸುವುದೇ ಇಲ್ಲ. ಒಳ್ಳೆ ಮಾತೇನೆಂದರೆ ಅವಳು ಸುಳ್ಳು ಹೇಳುವ ಬದಲು ಸುಮ್ಮನಾಗಿ ಬಿಡುತ್ತಾಳೆ ಅಷ್ಟೆ."
"ಅಯ್ಯೋ ಹುಚ್ಚಿ, ಅದಿಷ್ಟೆ ಇಷ್ಟಾ ಅಂತ ಹೇಳಲಿಲ್ವ ನಾನು. ಅವಳ ಅಳು, ಸಿಟ್ಟು ಎಷ್ಟು ಸ್ಪೋಟಕನೊ ಅವಳ ಪ್ರೀತಿನೂ ಹಾಗೆ ಕಣೆ. ನೋಡು ನಿನ್ನ ಅಕ್ಕ ಮತ್ತೆ ನಿನ್ನ ಮಧ್ಯ ಸುಮಾರು ೭ ವರ್ಷದ ಅಂತರವಿದೆ ಮತ್ತೆ ನನ್ನ ಮತ್ತೆ ಅವಳ ಮಧ್ಯ ಸುಮಾರು ೯ ವರ್ಷದ ಅಂತರವಿದೆ. ಅಂದರೆ ಸರಿಯಾಗಿ ನೋಡಿದರೆ ನಾನು ನಿಮ್ಮಪ್ಪ ಶತಮಾನದ ಕೊನೆಯವನು ಮತ್ತೆ ನಿಮ್ಮಕ್ಕ ನಿನ್ನ ಶತಮಾನದ ಮೊದಲಿನವಳು. ನಾನು ಹೇಳೋಕೆ ಹೊರೆಟಿದ್ದು ಏನೆಂದರೆ, ಅವಳ ಈ ಚಡಪಡಿಕೆ, ಸಿಟ್ಟು, ನಗು, ಅಳು, ರೋಮಾಂಚನ, ಎಲ್ಲಾ ನನ್ನನ್ನು ಬೇಗ ಮುದುಕನಾಗಲು ಬಿಡುವುದಿಲ್ಲ. ಮತ್ತೆ ಅವಳಲ್ಲಿನ ಮುಕ್ತ ವ್ಯವಹಾರ ನನಗೆ ನನ್ನಲ್ಲಿ ಒಂದು ನಂಬಿಕೆ ಹುಟ್ಟಿಸುತ್ತೆ. ಈಗನ ಕಾಲದಲ್ಲಿ ಎಲ್ಲಾದು ಅತಿ ವೇಗ ಗತಿಯಲ್ಲಿ ನೆಡೆಯುತ್ತೆ, ಸಂಬಂಧಗಳಲ್ಲಿ ಕೂಡ ವೇಗ ಬಂದಿದೆ ಈಗ, ನಿಮ್ಮ ಜನರೇಶನವರಿಗೆ ಪ್ರೀತಿಯಾಗಿದಿಯೊ ಇಲ್ಲವೊ ಅನ್ನೊದು ತಿಳಿಯೋಕೆ ಒಂದು ಅನುಮಾನ, ಆ ಪ್ರೀತಿ ಮದುವೆಯಷ್ಟು ಗಂಭೀರವೊ ಅಂತ ತಿಳಿಯೋಕೆ ಇನ್ನೊಂದು ಕನ್‍ಫ್ಯೂಶನ್. ಆದರೆ ಇವಳಲ್ಲಿ ಈ ನೂರೆಂಟು ಕನ್‍ಫ್ಯೂಶನ್‍ಗಳಿಲ್ಲ. ಅವಳು ಪ್ರೀತಿಸ್ತೀನಿ ಅಂದ್ರೆ ನಿಂಗೆ ಗೊತ್ತಾಗುತ್ತೆ ಅವಳಿಗೆ ಅದರಲ್ಲಿ ಒಂದು ಗುಲಗಂಜಿಯಷ್ಟು ಅನುಮಾನವಿಲ್ಲ ಅಂತ. ಆ ತರಹದ ಒಂದು ವ್ಯಕ್ತಿ ಮುಕ್ತವಾಗಿ ತನ್ನ ಭಾವನೆಗಳನ್ನು ತೋರಿದಾಗ ನನಗೆ ನನ್ನಲ್ಲಿ, ಅವಳ ಬಗ್ಗೆ ಇರುವ ನನ್ನ ಪ್ರೀತಿಯಲ್ಲಿ ಒಂದು ದೃಢವಾದ ನಂಬಿಕೆ ಬರುತ್ತೆ. ಆ ನಂಬಿಕೆನೆ ನನ್ನ ಎಲ್ಲಾ ಖುಷಿಗಳಿಗೆ ಅಡಿಪಾಯ. ಮತ್ತೆ ತಂಗಿಯಾಗಿ ನೀನು ಗಮನಿಸಿಯೆ ಇರ್ತೀಯಾ, ಇಷ್ಟೆಲ್ಲಾ ಮುಕ್ತವಾಗಿ ವ್ಯವಹರಿಸುವ ನಿಮ್ಮಕ್ಕ ಬೇರೆಯವರಿಗೆ ಘಾಸಿ ಮಾಡಲು ಯಾವಾಗಲು ಇಷ್ಟ ಪಡುವುದಿಲ್ಲ. ಅವಳ ಯಾವುದೆ ಮಾತು ಬೇರೆಯವರಿಗೆ ನೋವಾಗಬಹುದು ಅಂತ ಅನಿಸಿದ್ರೆ ಅವಳು ಅದನ್ನು ವ್ಯಕ್ತ ಪಡಿಸುವುದೇ ಇಲ್ಲ. ಒಳ್ಳೆ ಮಾತೇನೆಂದರೆ ಅವಳು ಸುಳ್ಳು ಹೇಳುವ ಬದಲು ಸುಮ್ಮನಾಗಿ ಬಿಡುತ್ತಾಳೆ ಅಷ್ಟೆ."
ಒಂದು ಮಾತಿಗೆ ಅರ್ಧ ಮಾತಾಡುವ ಭಾವ, ಒಂದು ಚಿಕ್ಕ ಕುತೂಹಲದ ಪ್ರಶ್ನೆಗೆ ಇಷ್ಟು ದೊಡ್ಡ ಸಮಾಧಾನವನ್ನು ಹೇಳುವುದನ್ನು ಕೇಳಿ ವರ್ಷಾಳಿಗೆ ಆಶ್ಚರ್ಯ. ಪುಟ್ಟ ನಗುವಿನೊಂದಿಗೆ ಕೇಳಿದಳು "ನೀವು ಅವಳನ್ನು ತುಂಬಾ ಪ್ರೀತಿಸುತ್ತೀರಾ ಅಲ್ವಾ ಭಾವ?"
ಅವಳ ಪ್ರಶ್ನೆಯನ್ನು ಕೇಳಿ ಎಂದು ನಾಚದ ಪ್ರಕಾಶ್ ಭಾವನ ಕೆನ್ನೆಗಳು ಕೆಂಪಾದವು, ಆದರು ಸಂಭಾಳಿಸಿಕೊಂಡು ಅಂದರು "ನಾನು ಹೇಳಿದನ್ನು ಮತ್ತೆ ಅವಳ ಹತ್ರ ಹೇಳಿ ಬಿಡಬೇಡ ಮಾರಾಯ್ತಿ. ಆಮೇಲೆ ದಿನ ಹೀಗೆ ಮಾತಾಡಿ ಅಂತ ಅಂದ್ರೆ ನನ್ನ ಕುತ್ತಿಗೆಗೆ ಬರುತ್ತೆ ಮತ್ತೆ"
ಇಷ್ಟು ಹೇಳಿ ಪೇಪರನ್ನು ಮತ್ತೆ ಮುಖಕ್ಕೆ ಹತ್ತಿರ ಹಿಡಿದು ಕೂತರು ಅವಳ ಭಾವ. ಇದನ್ನೆಲ್ಲ ಕೇಳಿದ ವರ್ಷಾಳಿಗೆ ಅವಳಕ್ಕನನ್ನು ಹೊಸದಾಗಿ ನೋಡಿದ ಹಾಗಾಯಿತು. ಸುಮ್ಮನೆ ಎದ್ದು ಒಳ ನೆಡೆದು, ಅಕ್ಕನ ತೊಡೆಯ ಮೇಲೆ ತಲೆಯೂರಿ ಅಲ್ಲೆ ಕಾಲು ಚಾಚಿದಳು. ಅವಳ ಕೂದಲನ್ನು ಸಹಜವಾಗಿ ಸವರುತ್ತ ಭಾಗ್ಯ ಕೇಳಿದಳು "ಯಾಕೆ, ಇವತ್ತು ನನ್ನ ಜೊತೆ ಸಿನಿಮಾ ನೋಡೊಕೆ ಬಂದಿದ್ದೀಯಾ. ಅಷ್ಟೂ ಬೋರ್ ಹೊಡಿತಾ ಇದ್ದೀಯಾ"
"ಸುಮ್ಮನೆ ನಿಂಗೆ ಕಂಪನಿ ಕೊಡೋಣ ಅಂತ ಅಷ್ಟೆ. ಪ್ರತಿ ಸಾರಿ ಬರ್ತೀನಿ ಅನ್ಕೊಬೇಡ ಮತ್ತೆ."
ಅಷ್ಟರಲ್ಲಿ ಇವಳ ಒಳ ಬಂದಿದ್ದು ತಿಳಿದ ಮೋತಿನೂ ಒಳ ಬಂದು ಇವಳ ಕಾಲ ಮೇಲೆ ಮುಖವಿಟ್ಟು ಅಡ್ಡಾಯಿತು. ಒಂದು ಕ್ಷಣ ಬಿಟ್ಟು ವರ್ಷಾ ಅಂದಳು "ಅಕ್ಕ ನಿಂಗೆ ಯಾವತ್ತಾದರು ಹೇಳಿದ್ದೀನಾ ಐ ಲವ್ ಯೂ ಅಂತ?"
ವರ್ಷಾಳ ಪ್ರಶ್ನೆ ಕೇಳಿ ಸಿನಿಮಾ ನೋಡುವುದನ್ನು ಬಿಟ್ಟು ಇವಳ ಮುಖ ತಿರುಗಿಸಿ ಭಾಗ್ಯ ಕೇಳಿದಳು "ವರ್ಷಾ ಹುಷಾರಿದ್ಯ ನಿಂಗೆ, ಅಥವ ಮೆದಳು ಜ್ವರ ಏನಾದ್ರು ಬಂತಾ ಅಂತ"
"ಥೂ ಹೋಗಕ್ಕ, ನಿಂದೊಳ್ಳೆ..."
ಅಷ್ಟರಲ್ಲಿ ಅಡುಗೆ ಮನೆಯಿಂದ ಅಮ್ಮ ಭಾಗ್ಯಳನ್ನು ಕೂಗಿದರು. ಅಡುಗೆ ಮನೆಗೆ ಹೋಗಿ ಭಾವನಿಗೆ ಕಾಫಿ ತಿಂಡಿ ತೆಗೆದುಕೊಂಡು ಅವರಿಗೆ ಕೊಟ್ಟು ಬಂದ ಅಕ್ಕನ ಮುಖದ ಮೇಲಿನ ಒಂದು ಸಣ್ಣ ನಗೆ ನೋಡಿದ್ದು, ಅದೇನೋ ಖುಷಿ ಕೊಟ್ಟಿತು ವರ್ಷಾಳಿಗೆ. ಒಡಹುಟ್ಟಿದ ಅಕ್ಕನಾದರು ಭಾವನ ಕಣ್ಣುಗಳಿಂದ ಅವಳನ್ನು ನೋಡಿದಾಗ ಆ ಅಳುಬುರಕ ಭಾಗ್ಯಕ್ಕನ ಬದಲು ವರ್ಷಾಳಿಗೆ ಒಂದು ಸುಂದರವಾದ ಮನಸುಳ್ಳ, ಮುಕ್ತ ವ್ಯಕ್ತಿತ್ವದ, ಮನೋಹರಕರವಾದ ಭಾಗ್ಯ ಕಂಡಳು.
"ಮುಕ್ತವಾಗಿ ತನ್ನ ಭಾವನೆಗಳನ್ನು ತೋರಿದಾಗ ನನಗೆ ನನ್ನಲ್ಲಿ, ಅವಳ ಬಗ್ಗೆ ಇರುವ ನನ್ನ ಪ್ರೀತಿಯಲ್ಲಿ ಒಂದು ದೃಢವಾದ ನಂಬಿಕೆ ಬರುತ್ತೆ"
ಪ್ರತ್ಯುತ್ತರಅಳಿಸಿಲೇಖನದ ಈ ಸಾಲುಗಳು ಮನಸೂರೆಗೊಂಡವು.
ಚಲನಚಿತ್ರದ ಮೂಲಕ ಶುರುವಾಗುವ ಅನುಮಾನ ಮನದ ಚಿತ್ರಮಂದಿರದಲ್ಲಿ ಚಲಿಸುವ ಭಾವನೆಗಳನ್ನು ಹಿಡಿದಿಡುವಲ್ಲಿ ಅಂತ್ಯವಾಗುತ್ತದೆ. ನಂಬಿಕೆಗೆ ಅರ್ಹವಾದ ಶ್ವಾನ ಇಡಿ ಲೇಖನದಲ್ಲಿ ಗುಪ್ತ ಗಾಮಿನಿಯ ಹಾಗೆ ಎಡತಾಕುವುದು ಇಷ್ಟವಾಗುತ್ತದೆ. ನಂಬಿಕೆಯಿದ್ದಲ್ಲಿ ಪ್ರೀತಿ ಪ್ರೀತಿಯಿದ್ದಲ್ಲಿ ನಂಬಿಕೆ ಎನ್ನುವ ವಿಶ್ಲೇಷಣೆ ಈ ಶ್ವಾನದ ಪಾತ್ರದಲ್ಲಿ ಕಾಣುತ್ತದೆ. ವಯಸ್ಸಿನ ಅಂತರವಿರಬಹುದು ಆದರೆ ಅಂತರದಲ್ಲಿ ಮನವಿರಬಾರದು ವಿಚಾರಲಹರಿ ಭಾವನ ಪಾತ್ರದ ಮಾತುಗಳಲ್ಲಿ ಎದ್ದು ಕಾಣುತ್ತದೆ. ವರ್ಷ ಕೇಳುವ ಸಹಜ ವಯೋಮಾನದ ಪ್ರಶ್ನೆಗೆ ಸಹಜವಾದ ಆದರೆ ಪರಿಣಾಮಕಾರಿಯಾಗಿ ಉತ್ತರಿಸುವ ರೀತಿ ಇಷ್ಟವಾಯಿತು. ಏನೋ ಮಾತುಕತೆ ನಡೆದಿದೆ ಎನ್ನುವ ಭಾವನೆ ಭಾಗ್ಯಕ್ಕಳಿಗೆ ಬಂದರೂ ಅದನ್ನ ತೋರಗೊಡದೆ ವರ್ಷಳನ್ನು ಆದರಿಸುವ ಇಷ್ಟವಾಯಿತು. ಸುಂದರಜೀವನಕ್ಕೆ ನಂಬಿಕೆಯೇ ಇಟ್ಟಿಗೆ.. ಸಂತಸವೇ ಇಟ್ಟಿಗೆಗಳನ್ನು ಜೋಡಿಸುವ ಸಿಮೆಂಟ್ ಎನ್ನುವ ಸಂದೇಶ ನನಗೆ ಕಾಣಿಸಿತು. ಸುಂದರ ಕಥಾ ಪ್ರಸಂಗ. ಇಂತಹ ಪಾತ್ರಧಾರಿಗಳ ಮಾತುಗಳನ್ನು ನಿಮ್ಮಿಂದ ಬರೆಯಿಸಿ ನಮಗೆ ಓದಿಸಲು ಅನುವು ಮಾಡಿಕೊಡುವಂತೆ ಮಾಡಿದಾಗ ಮನಸ್ಸಿಗೆ ಬರುವ ಹಾಡು "ಭಾಗ್ಯವಂತರು ನಾವೇ ಭಾಗ್ಯವಂತರು" ಸೂಪರ್ ನಿವಿ ಸೂಪರ್
thank you so so much for your wonderful words :)
ಅಳಿಸಿಸರಿಯಾಗಿ ನೋಡಿದರೆ ನಾನು ನಿಮ್ಮಪ್ಪ ಶತಮಾನದ ಕೊನೆಯವನು ಮತ್ತೆ ನಿಮ್ಮಕ್ಕ ನಿನ್ನ ಶತಮಾನದ ಮೊದಲಿನವಳು. ನಾನು ಹೇಳೋಕೆ ಹೊರೆಟಿದ್ದು ಏನೆಂದರೆ, ಅವಳ ಈ ಚಡಪಡಿಕೆ, ಸಿಟ್ಟು, ನಗು, ಅಳು, ರೋಮಾಂಚನ, ಎಲ್ಲಾ ನನ್ನನ್ನು ಬೇಗ ಮುದುಕನಾಗಲು ಬಿಡುವುದಿಲ್ಲ. ಮತ್ತೆ ಅವಳಲ್ಲಿನ ಮುಕ್ತ ವ್ಯವಹಾರ ನನಗೆ ನನ್ನಲ್ಲಿ ಒಂದು ನಂಬಿಕೆ ಹುಟ್ಟಿಸುತ್ತೆ.
ಪ್ರತ್ಯುತ್ತರಅಳಿಸಿಇಡೀ ಕಥೆಯ ಸಾರವನ್ನು ಬಹಳ ಸುಂದರ ಪದಗಳು ಹಿಡಿದಿಟ್ಟುಕೊಂಡಿವೆ....ಸಂಭಾಷಣೆಯ ಶೈಲಿ ಇಷ್ಟ ಆಯ್ತು ನಿವಿ..ಒಂದು ಸಲಹೆ..
ಸಂಭಾಷಣೆಯನ್ನು ಇನ್ವರ್ಟೆಡ್ ಕಾಮಾ ಹಾಕಿ ಪ್ರತ್ಯೇಕ ಸಾಲಿನಲ್ಲಿಟ್ಟರೆ..ಸುಂದರ ಆಗುತ್ತೆ ಲೇಖನ...
ಶುಭವಾಗಲಿ.ಕನ್ನಡ ಬ್ಲಾಗಿಗೆ ಇನ್ನೊಂದು ಪ್ರತಿಭೆಯ ಬೆಳವಣಿಗೆ ಖುಷಿ ಕೊಡ್ತು.
Thanks for reading... sambhashaneyannu next linege haaki update madthini.. thanks for the suggestion :)
ಅಳಿಸಿಈ ಬರಹ ಓದಿದ ಮೇಲೆ ನನ್ನ ನಾದಿನಿಯೂ ನನ್ನ ಮಡದಿಯನ್ನ ಅವಳ ಜೀವನದಲ್ಲಿ ಒಮ್ಮೆಯಾದರೂ
ಪ್ರತ್ಯುತ್ತರಅಳಿಸಿ""ಅಕ್ಕ ನಿಂಗೆ ಯಾವತ್ತಾದರು ಹೇಳಿದ್ದೀನಾ ಐ ಲವ್ ಯೂ ಅಂತ?" ಮುದ್ದಿಸಬೇಕು ಎನ್ನುವ ಆಸೆ ಬಂತು! :(
ಭಾವ ನಾದಿನಿಯ ಮಧ್ಯೆ ನೆಡೆಯುವ ಮಾತುಕತೆ,ನಾದಿನಿ ಕೇಳುವ ಪ್ರಶ್ನೆಗಳಿಗೆ ಭಾವ ಉತ್ತರಿಸುವ ರೀತಿ, ಪ್ರೀತಿಯಲ್ಲಿರುವ ನಂಬಿಕೆ ಇವೆಲ್ಲಾ ಭಾಗ್ಯವಂತರು ಸಿನೆಮಾ ನೋಡುತ್ತಿರುವಾಗಲೇ ತುಂಬಾ ಚೆನ್ನಾಗಿ ಬರೆದಿದ್ದೀರಿ.
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೂ ಭೇಟಿ ಕೊಡಿ
ಪ್ರತ್ಯುತ್ತರಅಳಿಸಿ