ಹಾರೈಕೆಗಳ ಮಾಲೆ


‘ಬಾರ್ ಬಾರ್ ಯೇ ದಿನ್ ಆಯೇ, ಬಾರ್ ಬಾರ್ ಯೇ ದಿಲ್ ಗಾಯೇ, .....................
ಆರೇ ಕನ್ನಡ ಅಭಿಮಾನಿಗೆ ಹಿಂದಿಲಿ ಶುಭಾಶಯ ಹೇಳೋದಾ ............. ಯಾಕೋ ಸರಿ ಕಾಣಲಿಲ್ಲ ಅದಕ್ಕೆ ರೂಪಕ್ಕ ನಿಮಗಾಗಿ ನಿಮ್ಮ ಜನ್ಮದಿನಕ್ಕೆ ನನ್ನ ಹೃದಯದಿಂದ ಈ ಹಾರೈಕೆಗಳ ಮಾಲೆ***

ನಂಬಿಕೆಯ ನಂದಾದೀಪ ನಿಮ್ಮ ಮನದಲ್ಲಿ ಎಂದೆಂದು ಬೆಳಗುತ್ತಿರಲಿ. ಯಾವುದೇ ಸಂದರ್ಭ ಹಾಗೂ ವ್ಯಕ್ತಿಯು ನಿಮ್ಮ ನಂಬಿಕೆಗಳನ್ನು ಸುಳ್ಳಾಗಿಸದೆ ಇರಲಿ. 

ಪ್ರೀತಿಯ ಮಹಾನದಿ ನಿಮ್ಮೆಡೆಗೆ ಸದಾ ಹರಿಯುತ್ತಿರಲಿ. ಸುಡುವ ಬೇಗೆಯಲ್ಲಿ ನಿಮ್ಮ ಮನ ತಣಿಸುವಂತಿರಲಿ.

ನಿಮ್ಮ ಕಂಗಳಲ್ಲಿ ಸದಾ ಆಶಯದ ಹೊಳಪಿರಲಿ. ಕಣ್ಣಂಚಿನ ಹನಿಯ ಸಂಚಿಗೆ ಅದೆಂದು ಮಾಸದಿರಲಿ.

ಪ್ರತಿ ಕ್ಷಣದಲ್ಲೂ ಸಂತಸವನ್ನು ಕಾಣುವಂತಹ ಭವಿಷ್ಯ ನಿಮ್ಮದಾಗಿರಲಿ. ಅದನ್ನು ಹುಡುಕುವ ನಿಮ್ಮ ಉತ್ಸಾಹ ಎಂದು ತಗ್ಗದಿರಲಿ.

ಕರುಣಾಮಯಿ ಎನ್ನುವ ಬಿರುದು ನಿಮ್ಮದಾಗಿರಲಿ, ಹಾಗೆ ನಿಮ್ಮೆಡೆಗೆ ಕರುಣೆಯ ತಂಗಾಳಿ ಸದಾ ಬೀಸುತ್ತಿರಲಿ.

ನಿಮ್ಮ ಬಗ್ಗೆ ಕಾಳಜಿವಹಿಸುವ ಮನಸ್ಸುಗಳು ನಿಮ್ಮ ಸುತ್ತಲಿರಲಿ. ಶುಶ್ರೂಷೆ, ಆರೈಕೆ ಮಾಡುವ ನಿಮ್ಮ ಶಕ್ತಿ ಎಂದು ಕುಂದದಿರಲಿ.

 ಗೆಳೆತನದ ಸಂತಸದಲ್ಲಿ ನೀವು ಸದಾ ನಲಿಯುವಂತಾಗಲಿ. ಒಮ್ಮೆ ಮಕ್ಕಳ ಹಾಗೆ ತಲೆಹರಟೆ, ಒಮ್ಮೆ ಗಂಭಿರವಾದ ಚರ್ಚೆ, ಮನಸ್ಸಿಗೆ ಬಂದಾಗ ಭೂತ್ ಲಿಸ್ಟ್ .... ಹಾಗೆ ಏನು ಬೇಡವೆಂದಾಗ ಮೌನ ನೀಡುವಂತಹ ಸ್ನೇಹಿತರು ನಿಮ್ಮನ್ನು ಕಾಪಾಡುತ್ತಿರಲಿ.

ಹೊಸ ಸಾಹಸಗಳು, ಹೊಸ ಅನುಭವಗಳು ನಿಮ್ಮ ದಿನಗಳನ್ನು ರಾರಾಜಿಸುತ್ತಿರಲಿ. ಕಂಗಳಲ್ಲಿ ಹೊಳಪು, ಹೆಜ್ಜೆಯಲ್ಲಿ ಉತ್ಸಾಹ, ತುಟಿಯ ಮೇಲೆ ಕಿರುನಗೆ ನೀಡಿ, ಹೊಸ ದಿನಕ್ಕೆ ನೀವು ಆಸೆ ಮತ್ತೆ ಕಾತುರದಿಂದ ಕಾಯುವಂತೆ ಮಾಡಲಿ.

ನಿಮ್ಮನ್ನು ಪ್ರೀತಿ ಮತ್ತೆ ಮಮತೆಯ ಸಾಗರದಲ್ಲಿ ಮಿಯುಸುವಂಥಹ ಕುಟುಂಬ ಸದಾ ನಿಮ್ಮದಾಗಿರಲಿ. ಹೆಜ್ಜೆ ಹೆಜ್ಜೆಗೆ ಜೊತೆ ನೀಡುವ ಬಳಗ ನಿಮ್ಮ ಬೆನ್ನೆಲುಬಾಗಿರಲಿ.

ಸಂಭ್ರಮದಿಂದ ಕೂಡಿದ ಕ್ಷಣಗಳು ತುಂಬಿರುವ ದಿನ ನಿಮ್ಮದಾಗಿರಲಿ. ಪ್ರತಿ ಕ್ಷಣವು ಸಂಭ್ರಮಿಸುವಂತ ಸುದ್ಧಿಗಳು ನಿಮಗೆ ತಲುಪುತ್ತಿರಲಿ.

ಒಗ್ಗಟ್ಟಿನ ಸಿಹಿ ಅಪ್ಪುಗೆ ನಿಮ್ಮ ಜೀವನದಲ್ಲಿರಲಿ. ಸಂತೈಸಿ, ಬೆನ್ನು ಸವರಿ ಮುನ್ನುಗ್ಗು ಎನ್ನುವ ಬಲ ನಿಮಗೆ ನೀಡುತ್ತಿರಲಿ.

ಸಿಹಿ ನೆನಪುಗಳ ಪೆಟ್ಟಿಗೆ ತುಂಬಿ ತುಳುಕುತ್ತಿರಲಿ. ಕಹಿ ನೆನಪುಗಳ ಪೆಟ್ಟಿಗೆಯನ್ನು ಪ್ರೀತಿಯಿಂದ ತೆರೆಯುವಂತ ಶಕ್ತಿ ನಿಮಗೆ ಕೊಡಲಿ.

ಐಷಾರಾಮದ ಬದುಕು ನಿಮ್ಮದಾಗಿರಲಿ. ಲೌಕಿಕದ ಜೊತೆಗೆ ಮನಸ್ಸು, ಬುದ್ಧಿಗೂ ಐಷಾರಾಮದ ಸಿಹಿತುತ್ತು ಸಿಗುತ್ತಿರಲಿ.

ನೀವಿಟ್ಟ ಪ್ರತಿ ಹೆಜ್ಜೆಯೂ ಯಶಸ್ಸಿನ ಬಾಗಿಲನ್ನು ತಟ್ಟಲಿ. ನಿಮ್ಮ ಜೀವನ ಯಶಸ್ಸಿನ ಹೂಹಾಸಿನಲ್ಲಿ ಸಾಗುವಂತಾಗಲಿ.

ಸಿಹಿ ಕನುಸಗಳ ನಿದಿರೆಗಳು ನಿಮ್ಮದಾಗಿರಲಿ. ಕಂಡ ಸಿಹಿ ಕನಸುಗಳು ನನಸಾಗಿ ನಿಮಗೆ ಸಂತಸವನ್ನು ತರಲಿ.

ಸಮಯ ನಿಮ್ಮ ಕೈಗೊಂಬೆಯಾಗಿರಲಿ, ನಿಮ್ಮ ಗಡಿಯಾರದ ಮುಳ್ಳು ಸದಾ ಒಳ್ಳೆ ಸಮಯವನ್ನೇ ತೋರಿಸಲಿ.

... ತುಮ್ ಜಿಯೋ ಹಜಾರೊ ಸಾಲ್ ಯಹಿ ಹೆ ಮೇರಿ ಆರಜೂ”

 ***Conditions apply – The above wishes have been discussed with universe in complete detail explaining each wish to be fulfilled keeping in mind your happiness. If unfulfilled the Universe will be responsible to make a full refund in form of lots of love and hugs. And she wishes you a very Happy Birthday. 😍😍😍

ಕಾಮೆಂಟ್‌ಗಳು

 1. ಮಳೆಯಲ್ಲಿ ನೆಡೆಯುತ್ತಾ ಹೋಗುವ ಅನುಭವ ಸೊಗಸು
  ಬೆಳದಿಂಗಳ ಮಳೆಯಲ್ಲಿ ನೆಡೆಯುವುದು
  ಕಡಲಿನ ದಡದಲ್ಲಿದ್ದಾಗ ತುಂತುರು ಮಳೆಯಲ್ಲಿ ನೆನೆಯುವುದು
  ಬೆಟ್ಟದ ಮೇಲಿದ್ದಾಗ ತುಂತುರು ಮಳೆಯಲ್ಲಿ ನೆನೆಯುವುದು
  ಕಾಮನಬಿಲ್ಲು ಮೂಡಿದಾಗ ಅದರಡಿ ನೆನೆಯುವುದು..

  ಇವುಗಳು ಕೊಡುವ ಸಂತಸಕ್ಕೆ ಬೆಲೆ ಕಟ್ಟಲಾಗದು..

  ನಿಮ್ಮ ಬರಹ ಓದಿದಾಗ ನನಗೆ ಅನ್ನಿಸಿತ್ತು ಈ ಮೇಲಿನ ಭಾವ..
  ಸೂಪರ್ ಇದೆ ಸಿಬಿ

  ಜನುಮದಿನದ‌ ಶುಭಾಶಯಗಳು DFR

  ಪ್ರತ್ಯುತ್ತರಅಳಿಸಿ
 2. D0NATE OR SELL YOUR K1DNEYS WITH THE SUM OF 500,000.00 USD,EMAIL FOR MORE INFORMATION : EMAIL : hospitalcarecenter@gmailcom
  WhatsApp +91 779-583-3215

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು