ಕಲ್ಲು ಮರಳಿನಾಟ



ಕೈಯಲ್ಲಿ ಮರಳು ಹಿಡಿದು ನೋಡಿದ್ದೀರಾ? ಮತ್ತೆ ಕಲ್ಲು? ಎಂಥ ಬೇರೆ ಬೇರೆ ಭಾವನೆಗಳು ಹುಟ್ಟುತ್ತವೆ ಹಿಡಿದಾಗ. ಮರಳು ಹಿಡಿದಷ್ಟು ಜಾರಿ ಹೋಗುತ್ತದೆ. ಆದರೆ ಕಲ್ಲು ಹಿಡಿದಷ್ಟು ಭಾರ.
ಮರಳು ಮಧುರ ನೆನಪಿದ್ದ ಹಾಗೆ ಹಿಡಿದಷ್ಟು, ನೆನೆಸಿಕೊಂಡಷ್ಟು ಜಾರಿಹೋಗುತ್ತದೆ, ಮಸುಕು ಮಸುಕಾಗುತ್ತದೆ. ಆದರೆ ಕೆಟ್ಟ ನೆನಪು ಕಲ್ಲಿದ್ದ ಹಾಗೆ ನೆನೆಸಿಕೊಂಡಷ್ಟು ಭಾರ, ನೋವು.
ಆದರೆ ಇದು ಕಲ್ಲು, ಮರಳನ್ನು ಕೈಯಿಂದ ಬಿಟ್ಟಷ್ಟು ಸುಲಭವಾಗಿ ಮನಸ್ಸಿನಿಂದ ಬಿಡದು. ಅದು ಮನಸ್ಸಿನಲ್ಲೇ ಕರಗಬೇಕು. ಮರಳು ಕರಗಿ ಕನ್ನಡಿಯಾದರೆ ಕಲ್ಲು ಕರಗಿ ನೀರಾಗಬೇಕು. ಕನ್ನಡಿ ನಮ್ಮ ನಗುವನ್ನು ಬಿಂಬಿಸಿ ನಗಿಸುತ್ತದೆ, ನೀರು ಕಣ್ಣೀರಾಗಿ ಹರಿದು ಹೋಗುತ್ತದೆ. ಆ ಹಂತ ಬರುವಷ್ಟರಲ್ಲಿ ಮನಸ್ಸು ಬಹುಷಃ ಆ ನೆನಪಿಗೆ ನಗುವುದನ್ನು ಅಳುವುದನ್ನು ಮರೆತು ಇನ್ಯಾವುದೋ ಮರಳನ್ನು ಕನ್ನಡಿಯಾಗಿಸಲು, ಕಲ್ಲನ್ನು ನೀರಾಗಿಸಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುತ್ತದೆ. ಅದರದು ನಿರಂತರ ಹೋರಾಟ, ನಿಲ್ಲದ ಪಯಣ. 
 
Its a timeless journey of heart.........................

ಕಾಮೆಂಟ್‌ಗಳು

  1. ಮರಳು ಕಲ್ಲಿನ ಆಟದ ಪಾಠ ಸೊಗಸಾಗಿದೆ. ಸುಂದರ ನೆನಪುಗಳಂಥ ಮರಳುಕಣಗಳನ್ನು ಹಿಡಿದಿಡುವ ಪ್ರಯತ್ನ ಯಶಸ್ವಿಯಾಗೋಲ್ಲ.. ಹಾಗೆಯೇ ಬೇಡದ ನೆನಪುಗಳು ಭಾರವಾಗಿ ಕಾಡುತ್ತವೆ. ಕಾಡುವ ಬೇಡದ ನೆನಪುಗಳನ್ನು ಮನದಲ್ಲಿ ಕುಟ್ಟಿ ಪುಡಿಮಾಡಿದಾಗ ಅವು ಮನದ ಮೂಲೆಯಿಂದ ಜಾರಿಹೊಗುತ್ತವೆ. ಎಂತಹ ಸುಂದರ ಬರಹ. ಒಂದನ್ನೊಂದು ಬಿಡಲಾರದ ಆದರೆ ಬೇಡಲಾರದ ಬಂಧಗಳು. ಕಥಾಲೇಖಕಿಯ ಪಯಣ ಶರವೇಗದಲ್ಲಿದೆ. ಅಭಿನಂದನೆಗಳು. ಇಷ್ಟವಾಯಿತು ಈ ಲೇಖನ.

    ಪ್ರತ್ಯುತ್ತರಅಳಿಸಿ
  2. ಸಾರ ಹಿಡಿದಿಡುವ ಹೂರಣ ತುಂಬಿದ ಹೋಳಿಗೆ ತಿಂದಂತಾಯಿತು. ಮರಳ ಕನ್ನಡಿಯಾಗಿಸುವ ಮತ್ತು ಕಲ್ಲ ನೀರಾಗಿಸುವ ಕಲ್ಪನೆಗಳು ಇಷ್ಟವಾದವು, ನಿವಿ.

    ಪ್ರತ್ಯುತ್ತರಅಳಿಸಿ
  3. ಮರಳ ಆಪ್ತತೆ ಕಲ್ಲಿನಲ್ಲಿ ಕಾಣಸಿಗದು. ಅಂತ ಹೆಪ್ಪುಗಟ್ಟಿದ ಕಲ್ಲು ಕಡೆಗೆ ಬಳಕೆಯಾಗುವುದು ಜೀವವಿಲ್ಲದ ಗರ್ಭಗುಡಿಯ ಮೂರ್ತಿಗೋ ಅಥವಾ ಗೋರಿಯ ಕಲ್ಲಿಗೋ! ಈ ನಡುವೆ ನಾವು ಓದಿದ ಅಪರೂಪದ ಬರಹ ಶೈಲಿ.
    http://badari-poems.blogspot.in/

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು