ಬೇಕು
ಹ್ಮ್.........
"ಗರ್ಲ್ ಫ್ರೆಂಡ್ ಮಾಡ್ಕೊತ್ತಾರೆ, ನಮ್ಮುಂದೇನೇ ಅವರನ್ನ ಓಡಾಡಿಸಿ ಹೊಟ್ಟೆ ಉರಿಸ್ತಾರೆ"
ಹಮ್.......
ಆಫಿಸ್ ಕೆಫೆಯಲ್ಲಿ ಕೂತು ತನ್ನ ಹೊಟ್ಟೆ ಉರಿ ಹಂಚ್ಕೋತಾ ಇದ್ದ ಉಷಾಳಿಗೆ ಶ್ರಾವ್ಯಾಳ ಹಮ್ ಸಾಕಾಗಲಿಲ್ಲ. ಎದುರಿಗೆ ಕೂತವಳ ಕೈ ಅಲುಗಿಸಿ ಕೇಳಿದಳು "ಏನಾಯ್ತೆ, ಏನು ಹೇಳ್ತಾನೆ ಇಲ್ಲ?"
"ಏನಿಲ್ಲ ಕಣೆ, ನೀ ಹೇಳು" ಎಲ್ಲೋ ನೋಡ್ತಿದ್ದವಳು ಕಣ್ಣು ಕಿತ್ತು ಉಷಾಳ ಕಡೆ ನಗೆ ಬೀರಿದಳು
"ಶ್ರಾವಿ ಅವನನ್ನ ತುಂಬಾ ಮಿಸ್ ಮಾಡ್ತಾ ಇದ್ದೀನಿ ಕಣೆ"
"ಮಿಸ್ ಮಾಡ್ತಾ ಇದ್ಯಾ? ... ಅವನು ಬರಿ ಕ್ರಷ್ ಅಂದೆ?"
"ನಾನು ಹಾಗೆ ಅನ್ಕೊಂಡಿದ್ದೆ. ಆದರೆ ಯಾಕೋ ತುಂಬಾ ಮಿಸ್ ಮಾಡ್ತಾ ಇದ್ದೀನಿ. ನಿಂಗೆ ಅರ್ಥವಾಗೋಲ್ಲ ಬಿಡು"
ಒಂದು ಉಸಿರೆಳೆದು ಶ್ರಾವ್ಯ ಅಂದಳು "ಅವನ ನೆನಪು ಬಂದ್ರೆ ಹೊಟ್ಟೆ ಒಳಗಿಂದ ಸಂಕಟವಾಗುತ್ತೆ. ಉಸಿರಾಡೋದು ಕಷ್ಟವಾಗುತ್ತೆ. ಕೈ ಕಾಲೆಲ್ಲ್ಲ ತಣ್ಣಗಾಗುತ್ತೆ. ಅವನ ಘಮ, ಅವನ ಧ್ವನಿ, ಅವನ ಸ್ಪರ್ಶ ಎಲ್ಲವು ಕಾಡುತ್ತೆ. ನನ್ನ ಜೊತೆ ಹಂಚ್ಕೊಬೇಕಾದ ನಗುವನ್ನ ಇನ್ಯಾರ ಜೊತೆಗೆ ಹಂಚ್ಕೊತ್ತಾ ಇದ್ದಾನೋ ಅಂತ ನೆನಸಿಕೊಂಡು ಮೈ ಉರಿಯುತ್ತೆ. ಆಯ್ತು ಇನ್ನು ನೆನಸಿಕೊಳ್ಳಲ್ಲ ಅಂದ ನಿರ್ಧಾರ ಮಾಡಿದ ದಿನನೇ ಜಾಸ್ತಿ ನೆನಪಾಗ್ತಾನೆ. ಎಷ್ಟು ಮೈ ಮರೆತು ಏನೇ ಮಾಡ್ತಿದ್ರು ಅದೆಲ್ಲಿಂದಾನೋ ಅವನ ನೆನಪು ನುಸುಳಿಕೊಂಡು ಬಂದು ಕಾಡುತ್ತೆ, ಹೇಗೋ ಅವನನ್ನ ಮರೆತು ಸಮಯ ಕಳೆದುಬಿಟ್ರೇ ರಾತ್ರಿ ಕನಸಲ್ಲಾದ್ರು ಬಂದು ಕಾಡ್ತಾನೆ ......."
ಶ್ರಾವ್ಯಾಳ ಮಾತು ಕೇಳ್ತಾ ಇದ್ದ ಉಷಾಳಿಗೆ, ಯಾವಾಗ್ಲೂ ಮುಗುಳು ನಗೆ ಬೀರುತ್ತಾ, ಗಲಗಲ ಓಡಾಡೋ ಶ್ರಾವ್ಯ ಇವಳೇನಾ? ಅನ್ನೋ ಅನುಮಾನ. ತನ್ನ ನೋಡದೆ ಶ್ರಾವ್ಯಾಳ ಕಣ್ಣು ಇನ್ನೆಲ್ಲೋ ನೆಟ್ಟಿರೋದನ್ನ ನೋಡಿ, ಉಷಾ ಅವಳ ನೋಟಾನೆ ಹಿಂಬಾಲಿಸಿದಳು, ಅಲ್ಲೇ ಕಾಫಿ ಕುಡಿಯುತ್ತಿದ್ದ ಅವನನ್ನು ನೋಡಿ ಇವಳ ಮಾತು ಅರ್ಥವಾಯಿತು.
ತಕ್ಷಣ ಶ್ರಾವ್ಯಾಳನ್ನ ಎಬ್ಬಿಸಿಕೊಂಡು ಹೇಳಿದಳು "ನೆಡಿ ಹೊರಡೋಣ, ನಂಗೆ ಪಾನಿ ಪುರಿ ತಿನ್ನಬೇಕು ಅನಿಸ್ತಾ ಇದೆ. ಕೊಡ್ಸು ಬಾ"
ಮೂಕ ಗೊಂಬೆಯಂತೆ ಅವನನ್ನೇ ನೋಡ್ತಾ ಇದ್ದ ಶ್ರಾವ್ಯಳ ಗಮನಕ್ಕೆ ಉಷಾ ಹೇಳಿದ್ದಾಗಲಿ, ಅವಳು ಎಳೆದುಕೊಂಡು ಹೋಗಿದ್ದಾಗ್ಲಿ ಏನು ಗೊತ್ತಾಗಲಿಲ್ಲ.
ಅವನು ಅಷ್ಟೇ, ದಟ್ಟ ಕಾಡಿನ ಮಧ್ಯೆ ಅಪರೂಪಕ್ಕೆ ಕಾಣೋ ಚಂದಿರನ ಬೆಳಕನ್ನು ಕಂಡರೆ ಆಗೋ ಆನಂದವನ್ನು ಕಣ್ತುಂಬಾ ತುಂಬಿಕೊಂಡು ನೋಡ್ತಾ ಇದ್ದ.
ದೂರವಿದ್ದು ೩ ವರ್ಷಗಳೇ ಆದರು ಇನ್ನು ಅವಳನ್ನ ಮರೆಯಲಾಗಲಿಲ್ಲ ಅನಿರುದ್ಧನ ಕೈಲಿ. ಈ ಪ್ರಾಜೆಕ್ಟ್ ತಗೊಂಡಾಗಲೇ ಗೊತ್ತಿತ್ತು ಅವನಿಗೆ ಶ್ರಾವ್ಯಾ ಮತ್ತೆ ಅವಳ ದೂರುವ ಕಣ್ಣನ್ನು ಎದುರಿಸಬೇಕು ಅಂತ. ಆದ್ರೆ ದೂರವಿದ್ದು ಇಷ್ಟು ದಿನಗಳಾದ ಮೇಲೆ ಇನ್ನು ಅವಳ ಪ್ರಭಾವ ನನ್ನ ಮೇಲೆ ಬೀರೋಲ್ಲ ಅನ್ನೋ ಭಂಡ ದೈರ್ಯದಿಂದ ಬಂದಿದ್ದ.
ಬಂದು ಒಂದು ವಾರವಾಗಿತ್ತು, ಇಷ್ಟು ದಿನದಲ್ಲಿ ಅದೆಷ್ಟು ಸಾರಿ ತನ್ನ ಮೂರ್ಖತನವನ್ನು ಬೈಕೊಂಡರು ಸಾಕಾಗಲಿಲ್ಲ ಅವನಿಗೆ.
ಮೊದಲನೇ ದಿನ ಆಫೀಸಿಗೆ ಬಂದಾಗಲೇ ಎದುರಾದವು ಆ ಕಣ್ಣುಗಳು. ಮೊದಲು ಅಚ್ಚರಿ, ಆಮೇಲೆ ಅನುಮಾನ, ಆಮೇಲೆ ಸಿಟ್ಟು.. ಇನ್ನೇನು ತನ್ನ ಭಾವಗಳನ್ನು ಅಡಗಿಸುವ ಮುನ್ನ ಕಾಣಿಸಿದ ಒಂದು ಅರ್ಧ ಕ್ಷಣದ ದುಃಖ. ಅದೇ ಆ ದುಃಖ ಇವನನ್ನು ಸೋಲಿಸಿದ್ದು, ಇವನ ಧೈರ್ಯವನ್ನು ಬುಡ ಸಮೇತವಾಗಿ ಕಿತ್ತು ಹಾಕಿದ್ದು. ಆ ಅರ್ಧ ಕ್ಷಣದಲ್ಲೇ ಅವನಿಗೆ ತನ್ನ ಮೂರ್ಖತನ ಅರ್ಥವಾಗಿದ್ದು.
ಅದಾದ ಮೇಲೆ ಒಂದೊಂದು ದಿನವು ಒಂದೊಂದು ಯುಗದಂತೆ, ಅವಳು ಎದುರಾಗದಿರಲಪ್ಪ ಅಂತ ಎಂದು ನಂಬದ ದೈವವನ್ನು ಕೇಳುತ್ತಿದ್ದ ಆದರೆ ಬಂದ ಕೂಡಲೇ ಅವಳೆಲ್ಲಿ ಎಂದು ಹುಡುಕುತ್ತಿದ್ದ.
ಅವನಿಗೆ ಇನ್ನು ಅರ್ಥವಾಗದ ಸಂಗತಿ ಅಂದರೆ ಇದು ಸರಿಯಾಗೋಲ್ಲ ಅಂತ ಸಂಬಂಧ ಮುರಿದು, ಅವಳ ಮತ್ತೆ ತನ್ನ ಮಧ್ಯ ಏನು ಉಳಿದಿಲ್ಲ ಅಂತ ಮನಸ್ಸನ್ನು ನಂಬಿಸಿದ ಮೇಲೂ ಇಂದು ಕೂಡ ಅವಳ ಮುಖ ನೋಡಿದ ಕೂಡಲೇ ಅವಳ ಯೋಚನೆ, ಭಾವನೆ ಎಲ್ಲವು ಇವನನ್ನು ತಾಕುತ್ತಿತ್ತು. ಅವಳು ಎಲ್ಲಿದ್ದಾಳೆ, ಯಾರೊಂದಿಗೆ ಮಾತಾಡ್ತಿದ್ದಾಳೆ, ಎಲ್ಲವು ಅವನಿಗರಿವಿಲ್ಲದೆ ಗಮನಿಸುತ್ತಿದ್ದ. ಹೀಗೆ ಆದರೆ ಮತ್ತೆ ಅದೇ ಮಾಯಾಜಾಲಕ್ಕೆ ಸಿಲುಕುತ್ತೀನಿ ಅಂತ ಅವನ ಮೆದುಳು ಹೆದರಿದರು. ಇನ್ನೊಂದು ಸ್ವಲ್ಪ ದಿನ ಅವಳ ಸಮೀಪವಿರಲು ಬಿಡು ಎಂದು ಮನ ಅಂಗಲಾಚುತಿತ್ತು.
ಉಷಾಳ ಕೈಯಿಂದ ಹೇಗೋ ತಪ್ಪಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ ಶ್ರಾವ್ಯಳಿಗೆ ಪದೇ ಪದೇ ಆ ಕೊನೆ ದಿನವೇ ನೆನಪಾಗುತ್ತಿತ್ತು.
"ಏನು ಹೇಳ್ತಾ ಇದ್ಯಾ ಅನಿ ... ಅದು ಹೇಗೆ ನೀನು ನನ್ನ ಒಂದು ಮಾತು ಕೇಳದೆ ಯು.ಕೆ ಗೆ ಹೋಗೋ ನಿರ್ಧಾರ ತಗೊಂಡೆ"
"ಶ್ರಾವಿ ನಾನು ಮೊದಲಿಂದಾನು ನಿನಗೆ ಹೇಳಿದ್ದೀನಿ, ನನ್ನ ಸ್ವಾತಂತ್ರ್ಯ ಮತ್ತೆ ಕೆಲಸ ಇದರ ವಿಷಯದಲ್ಲಿ ನಾನು ನನ್ನ ಬಿಟ್ಟು ಇನ್ಯಾರನ್ನು ಲೆಕ್ಕಿಸೋಲ್ಲ."
"ವಾಟ್ ?? ಅಂದ್ರೆ ನಾನು ಜಸ್ಟ್ ಒಂದು ಲೆಕ್ಕಾನ. ಬೇಕಾದಾಗ ಕೂಡ್ಸೊದು ಇಲ್ಲಾಂದ್ರೆ ಭಾಗಿಸೋದಾ?'
"ನೋಡು ಓವರ್ ರಿಯಾಕ್ಟ್ ಮಾಡಬೇಡ."
"ಓವರ್ ರಿಯಾಕ್ಟ್ ಮಾಡ್ತಾ ಇಲ್ಲ ಅನಿ, ನನಗೆ ಇಂತ ಅವಕಾಶ ಬಂದಿದ್ದು ನಾನು ಹೀಗೆ ನಿರ್ಧರಿಸಿದರೆ ಆಗ ಏನ್ ಹೇಳ್ತಿದ್ದೆ ನೀನು"
"ಖಂಡಿತ ಹೋಗು ಅಂತಿದ್ದೆ. ನೋಡು ಜೀವನದಲ್ಲಿ ಜನ ಬರ್ತಾರೆ ಹೋಗ್ತಾರೆ, ಅದಕ್ಕಾಗಿ ಒಳ್ಳೆ ಅವಕಾಶಗಳನ್ನ ಬಿಡಬಾರದು. ನಾನು ಹಾರಬೇಕು ಅಂತ ಇದ್ದೀನಿ ಶ್ರಾವಿ, ನೀನು ನನ್ನ ಕಟ್ಟಿ ಹಾಕೋಕೆ ನೋಡ್ತಾ ಇದ್ಯಾ"
"ಓ ಹಾಗೋ, ಈಗ ನನ್ನ ಪ್ರೀತಿ.... ನಾನು ನಿನಗೆ ಪಂಜರದ ತರಹ ಕಾಣ್ತಾ ಇದೆ........ ನಿನಗೆ ಹೀಗೆ ಅನಿಸ್ತಾ ಇದೆ ಅಂದ್ರೆ ಇನ್ನು ನಾವು ನಮ್ಮ ಮಧ್ಯ ಮಧುರವಾದದ್ದು ಏನೋ ಇದೆ ಅನ್ಕೊಳ್ಳೋದು ಮೂರ್ಖತನ ಅಲ್ವ?"
"ಹಾಗಲ್ಲ ಶ್ರಾವಿ..... ನಮ್ಮ ಮಧ್ಯೆ ಇರೋ ಪ್ರೀತಿ ಸುಳ್ಳಲ್ಲ ಆದ್ರೆ ಅದಕ್ಕಾಗಿ ನಾನು ನನ್ನ ಕನಸುಗಳನ್ನ ಬಲಿ ಕೊಡೋಲ್ಲ. ಜೀವನದಲ್ಲಿ ಎತ್ತರಕ್ಕೆ ತಲುಪಿ ಅಲ್ಲಿಂದ ಹಾರಬೇಕು ಅಂತ ಕನಸು ಕಟ್ಟಿರುವವನು ನಾನು. ......... ನೀನು"
"ನಾನು ನಿನ್ನ ಕಾಲಿಗೆ ಸುತ್ಕೊಂಡಿರೋ ಬೇಡಿ !"
"ನಾ ಹಾಗಂತ ಹೇಳಿಲ್ವಲ್ಲ"
"ನೀನು ಇಲ್ಲಾ ಅಂತಾನು ಹೇಳಿಲ್ಲ"
ಅದೇ ಕೊನೆ ಸಾರಿ ಅವನನ್ನ ಮಾತಾಡ್ಸಿದ್ದು. ಆಮೇಲೆ ಅವನು ತಿರುಗಿ ಕೂಡ ನೋಡದೆ ಹೋದ. ಆದ್ರೆ ಇಂದು ಕೂಡ ಶ್ರಾವ್ಯಾಳ ಮನಸಲ್ಲಿ ಒಂದು ವಿಚಾರ ಕಾಡ್ತಾ ಇತ್ತು. "ಬಹುಶಃ ನಾನು ಅವನನ್ನ ನನ್ನ ಜೊತೆ ಕಟ್ಟಿ ಹಾಕೋಕೆ ಪ್ರಯತ್ನಿಸುವ ಬದಲು ಅವನ ಜೊತೆ ಹಾರೋಕೆ ಪ್ರಯತ್ನಿಸಬೇಕಿತ್ತು ಅಂತ .." ಆದರೆ ಮತ್ತೆ ಹೀಗೂ ಅನಿಸುತ್ತಿತ್ತು "ನಾನ್ಯಾಕೆ ಹೋಗಬೇಕು, ಅವನು ಕರಿಬಹುದಿತ್ತಲ್ಲ. ಇಷ್ಟು ದಿನಗಳಾದ ಮೇಲೆ ಮತ್ತೆ ನನ್ನ ನೆಮ್ಮದಿಗೆ ಬೆಂಕಿ ಹಚ್ಚೋಕೆ ಬಂದಿದ್ದಾನೆ. ನಾನಿರೋದು ಅವನ ಗಮನಕ್ಕೂ ಬರೋದಿಲ್ಲ, ಆದರೆ ಇಡಿ ದಿನ ನನ್ನ ಗಮನವೆಲ್ಲ ಅವನ ಮೇಲೆ. ಯಾಕೋ ಅವನ ಪ್ರಾಜೆಕ್ಟ್ ಮುಗಿಯೋ ತನಕ ರಜ ತಗೊಳೋದೆ ಬೆಸ್ಟ್ ಅನ್ಸುತ್ತೆ. ....
ಆದರು ರಾಜ ತಗೊಳೋಕೆ ಆಗಲ್ಲ.... ಅವನ ಮುಖ ನೋಡಬೇಕು ಅಂತಲ್ಲ... ಅದು... ಅದು.... ಆಗಲ್ಲ ಅಷ್ಟೇ"
ತನ್ನ ಮನಸ್ಸಿಗೆ ತಾನೇ ಸಮಾಧಾನ ಹೇಳೋಕೆ ಆಗದೆ ಒದ್ದಾಡ್ತಾ ಇದ್ಲು ಶ್ರಾವ್ಯ. ಏನಾದ್ರೂ ಆಗಲಿ ಇದನ್ನ ಎದುರಿಸಿ ನಾನು ಅವನನ್ನ ಮರೆತಿದ್ದೀನಿ ಅಂತ ಅವನಿಗೆ ತೋರಿಸಿ ಅವನ ವಿರುದ್ಧ ಗೆಲ್ಲಬೇಕು ಅಂತ ನಿರ್ಧರಿಸಿದಳು. ಗಟ್ಟಿ ನಿರ್ಧಾರ ಮಾಡಿದ ಮೇಲೆ ಮನಸ್ಸಿಗೆ ಒಂದು ಸಮಾಧಾನವಾಯಿತು.
ಇತ್ತ ಅನಿರುದ್ಧ ಕೂಡ ಯೋಚಿಸಿದ "ಇಲ್ಲ ಇನ್ನು ಹೀಗೆ ಇದ್ದರೆ ಆಗೋಲ್ಲ, ಏನಾದ್ರೂ ಮಾಡಲೇ ಬೇಕು.." ಎಂದು ಒಂದು ನಿರ್ಧಾರ ತಗೊಂಡ, ತಕ್ಷಣ ತನ್ನ ಸ್ನೇಹಿತನಿಗೆ ಫೋನ್ ಮಾಡಿದ. "ಹೆಲೋ ವರುಣ್ ನಾನು ನಾಳೆ ಒಳಗೆ ಕೆಲವು ಕೆಲಸ ಮುಗಿಸಬೇಕು, ಯಾಕೆಂದ್ರೆ ನನ್ನ ಬದಲಿಗೆ ಈ ಪ್ರಾಜೆಕ್ಟ್ ಮುಗಿಸಲು ಇನ್ನೊಬ್ಬರನ್ನ ಕರಸ್ತಾ ಇದ್ದೀನಿ. ಮುಖ್ಯವಾದ ಕೆಲಸವೆಲ್ಲ ಹೇಗೂ ಆಗಿದೆ, ಬರಿ ಸಣ್ಣ ಪುಟ್ಟ ಅಡ್ಜಸ್ಟ್ಮೆಂಟ್ ಮಾತ್ರ ಬಾಕಿ ಇರೋದು. ಅಂದ ಹಾಗೆ ನನಗೆ ಒಂದು ನಂಬರ್ ಬೇಕಿತ್ತು, ಅವರ ಹೆಸರು ಉಷಾ.... "
ಮರುದಿನ ಶ್ರಾವ್ಯ ಬಂದ ಕೂಡಲೆ ಅವಳ ಕಣ್ಣು ತಂತಾನೇ ಅವನನ್ನ ಹುಡುಕಿದವು, ಎಲ್ಲೂ ಕಾಣದಿದ್ದಾಗ ತನಗೆ ತಾನು ಬೈದುಕೊಂಡಳು "ಛೆ .. ನಾನ್ಯಾಕೆ ಅವನನ್ನ ಹುಡುಕಲಿ....ಸುಮ್ನೆ ನನ್ನ ಕೆಲಸ ಎಷ್ಟು ಇದ್ಯೋ ಅಷ್ಟು ನೋಡ್ತೀನಿ"
ಮಧ್ಯಾಹ್ನದ ತನಕ ಅವನು ಕಾಣದಿದ್ದಾಗ ಒಮ್ಮೆ ಅವನ ಬಗ್ಗೆ ವಿಚಾರಿಸಲೇ ಅಂತ ಹುಟ್ಟಿದ ಯೋಚನೆಯನ್ನು ನಿರ್ದಯವಾಗಿ ಅದುಮಿಟ್ಟುಕೊಂಡಳು. ಸಂಜೆಯ ಹೊತ್ತಿಗೆ ತಲೆ ನೋವು ಶುರುವಾಗಿತ್ತು, ಅವನನ್ನು ಹುಡುಕಿ ಸೋತು ಸಿಟ್ಟು ಏರಿತ್ತು, ಕೆಲಸದ ಕಡೆ ಗಮನ ಕೊಡದೆ ತಪ್ಪುಗಳಾಗಿದ್ದವು ಅದನ್ನು ಸರಿ ಪಡಿಸುತ್ತಾ ಕೂತವಳಿಗೆ ಸಂಜೆ ಸರಿದು ಬಂದಿದ್ದೆ ತಿಳಿಯಲಿಲ್ಲ.
ಉಷಾ ಅವಳ ಕ್ಯಾಬಿನ್ ಹತ್ರ ಬಂದು, "ಏನೇ ಇನ್ನು ಮುಗಿದಿಲ್ವಾ?" ಅಂತ ಕೇಳಿದಾಗಲೇ ಎಚ್ಚರವಾಗಿದ್ದು.
"ಇಲ್ಲ ಉಷಾ ಯಾಕೋ ಇವತ್ತು ಏನು ಸರಿ ಆಗ್ತಾ ಇಲ್ಲ. ಇದನ್ನ ಇವತ್ತೇ ಮುಗಿಸಬೇಕು, ದರಿದ್ರದ್ದು ಸರಿಯಾಗ್ತಾನೆ ಇಲ್ಲ .. ನಾನು ಇಲ್ಲೇ ಇದ್ದು ಇದನ್ನ ಮುಗಿಸಿ ಮನೆಗೆ ಹೋಗ್ತೀನಿ ಕಣೆ. ನಾಳೆ ರಜ ಹಾಕಿದ್ರು ಹಾಕಬಹುದು. ನೀನು ಹೊರಡು."
ಉಷಾ ಏನೋ ಗೊಂದಲದಲ್ಲಿರೋದನ್ನ ನೋಡಿ ಶ್ರಾವ್ಯ ಕೇಳಿದಳು "ಏನಾಯ್ತು, ?? ಏನು ಯೋಚಿಸ್ತಿದ್ದೀಯಾ?"
ನಿಟ್ಟುಸಿರಿನೊಂದಿಗೆ ನಗೆ ಬೀರಿ ಉಷಾ ಅಂದಳು "ಏನಿಲ್ಲ, ನೀನು ಹೆಚ್. ಆರ್ ಮ್ಯಾನೇಜರ್ ಚೇಂಬರ್ಗೆ ಹೋಗಬೇಕಂತೆ, ಅದನ್ನ ಹೇಳೋಕೆ ನಾ ಬಂದಿದ್ದು. "
ಶ್ರಾವಿ ತನ್ನ ಕೆಟ್ಟ ದಿನ ಇನ್ನು ಮುಗಿದಿಲ್ಲ ಏನು ಯೋಚಿಸುತ್ತಾ ಅಂದಳು "ಅಯ್ಯೋ ಅವರಿನ್ನು ಹೋಗಿಲ್ವಾ.. ಅದೇನು ತಲೆ ತಿನ್ನೋದಿದ್ಯೋ ಆ ಮನುಷ್ಯನಿಗೆ... ಇನ್ನು ಕೆಲಸ ಬೇರೆ ಮುಗಿದಿಲ್ಲ. ಸರಿ ನಾನು ಹೋಗಿ ಅವರನ್ನು ಮೀಟ್ ಮಾಡಿ ಹಾಗೆ ಹೊರಡ್ತೀನಿ, ನೀನು ವೈಟ್ ಮಾಡಬೇಡ ಹೊರಡು, ಬೈ "
ಉಷಾಳನ್ನ ಆ ಕಡೆ ಕಳಿಸಿ, ೨ನೇ ಮಹಡಿಯಲ್ಲಿದ ಹೆಚ್. ಆರ್ ಚೇಂಬರ್ ಕಡೆ ಹೆಜ್ಜೆ ಹಾಕಿದಳು ಶ್ರಾವ್ಯ. ಇಡಿ ದಿನ ಒಂದು ಕ್ಷಣ ಬಿಡುವು ಸಿಕ್ಕ ತಕ್ಷಣ ಅವನ ನೆನಪು ಕಾಡುತಿತ್ತು, ಈಗಲೂ ಅವನು ಯಾಕೆ ಇವತ್ತು ಬಂದಿಲ್ಲ, ಹುಷಾರಿಲ್ವಾ, ನಾಳೆಯಿಂದ ಬರೋದೆ ಇಲ್ವಾ.. ಅಂತೆಲ್ಲ ಯೋಚಿಸುತ್ತಾ ಲಿಫ್ಟ್ ಬದ್ಲು ಮೆಟ್ಟಲು ಏರುತ್ತಾ ಹೋದಳು.
ಹೆಚ್. ಆರ್ ಚೇಂಬರ್ ಒಳಗೆ ಹೋಗಿ ನೋಡಿದ ಶ್ರಾವ್ಯಾಳಿಗೆ ಯಾರು ಕಾಣಲಿಲ್ಲ. ಇಲ್ಲೇ ಎಲ್ಲೋ ಹೋಗಿರಬೇಕು ಎಂದು ಯೋಚಿಸಿ ಅಲ್ಲೇ ಕಾಯ್ತಾ ಕೂತಳು. ಸ್ವಲ್ಪ ನಿಮಿಷಗಳ ನಂತರ ಬಾಗಿಲು ತೆರೆದ ಶಬ್ದವಾಗಿ ಶ್ರಾವ್ಯ ಮುಗುಳ್ನಗುತ್ತಾ ತಿರುಗಿದಳು "ಸರ್......? !! ... ನೀ...?"
ಒಳಗೆ ಬಂದು ಬಾಗಿಲು ಹಾಕಿದ ಅನಿರುದ್ಧನನ್ನು ನೋಡಿ ಒಮ್ಮೆಲೇ ಏನು ಮಾಡಬೇಕು ಎಂದು ತಿಳಿಯಲಿಲ್ಲ ಶ್ರಾವ್ಯಳಿಗೆ. ಇವಳನ್ನೇ ದಿಟ್ಟಿಸುತ್ತ ನಿಂತ ಅವನಿಗೆ ಏನು ಹೇಳಬೇಕು, ಹೇಗೆ ಪ್ರತಿಕ್ರಿಯಿಸಬೇಕು. ಇರಬೇಕೋ, ಹೋಗಬೇಕೋ, ಬೈಯಬೇಕೋ, ಏನು ಆಗಿಲ್ಲದಂತೆ ಮಾತಾಡಬೇಕಾ.??!!
ಉಸಿರಾಟ ತಗ್ಗಿತು, ಎದೆ ಬಡಿತ ಹೆಚ್ಚಿತು. ಒಮ್ಮೆಲೇ ಕೋಣೆಯೊಳಗೆ ಒಂದು ನಿಶ್ಚಲವಾದ ವಾತಾವರಣ, ಇಡಿ ಪ್ರಪಂಚದಲ್ಲೇ ಅವರಿಬ್ಬರೇ ಉಳಿದ ಭಾವ. ಅನಿರುದ್ಧ ನಿಧಾನವಾಗಿ ಅವಳೆಡೆ ಹೆಜ್ಜೆ ಹಾಕಿದ, ಎದ್ದು ಹೋಗಬೇಕು ಎಂದು ಅವಳ ಮನಸ್ಸು ಕೂಗುತ್ತಿದ್ದರು ಅವಳಿಂದ ಅಲ್ಲಾಡಲು ಆಗಲಿಲ್ಲ.
"ಶ್ರಾವಿ !!" ಅವನ ಮೇಲು ಧ್ವನಿ ಅವಳನ್ನು ಎಚ್ಚರಿಸಿತು, ದಡಬಡಾಯಿಸಿಕೊಂಡು ಎದ್ದಳು,
"ನಾನು ಹೆಚ್. ಆರ್ ಗೆ ವೈಟ್ ಮಾಡ್ತಾ ಇದ್ದೆ..... ಆದ್ರೆ ನಾ.... ನಾ... ನಾನು ಹೊರಡಬೇಕು ..." ಅನ್ನುತ್ತಾ ಎದ್ದಳು. ಕಾಲು ಆಡ್ತಾ ಇರಲಿಲ್ಲ, ಕೈ ನಡುಗುತ್ತಿತ್ತು. ತಲೇಲಿ ಅದೆಷ್ಟು ಸಾರಿ ಅವನು ಎದುರಾದರೆ ಹೇಗೆ ನೆಡ್ಕೊಬೇಕು ಅಂತ ಯೋಚಿಸಿದ್ದಳು. ಆದ್ರೆ ಈಗ ಯಾವುದು ನೆನಪಾಗ್ತಾ ಇರ್ಲಿಲ್ಲ. ಈ ಕ್ಷಣ ಅವನಿಂದ ದೂರ ಹೋಗಬೇಕು ಅಷ್ಟೇ ಅವಳಿಗೆ ಅನಿಸಿದ್ದು.
ಅವನನ್ನು ದಾಟಿ ಬಾಗಿಲೆಡೆಗೆ ಹೆಜ್ಜೆ ಹಾಕುವಾಗ ಅವನು ಕೈ ಹಿಡಿದ. ತಣ್ಣಗಾಗಿದ್ದ ಅವಳ ಪುಟ್ಟ ಕೈಯನ್ನು ಅವನ ಬೆಚ್ಚಗಿನ ದೊಡ್ಡ ಕೈಯಲ್ಲಿ ಹಿಡಿದಿದ್ದ. ಆ ಬಿಸಿ ಅವಳ ಮೈಯಲ್ಲ ಹರಡಿತು.
"ಪ್ಲೀಸ್ ಶ್ರಾವಿ, ಒಂದು ಸಾರಿ ನನ್ನ ಮಾತು ಕೇಳು"
ತನ್ನೆಡೆಗೆ ಅವಳನ್ನು ಸೆಳೆದ, ತನ್ನ ಸ್ವಂತ ಶಕ್ತಿಯೇ ಇಲ್ಲದಂತೆ ಅವಳು ಹತ್ತಿರವಾದಳು. ಹಿಂದಿನಿಂದ ಬಿಗಿದಪ್ಪಿದವನಿಗೆ ಅವಳ ಘಮ, ಅವಳ ಸ್ಪರ್ಶ ... ಎಷ್ಟು ವರ್ಷಗಳಾದ ಮೇಲೆ ಮನೆಗೆ ಮರುಳಿದ ಭಾವನೆ. ಇದು ನನ್ನ ಜಾಗ, ಇವಳ ಅಪ್ಪುಗೆಯಲ್ಲಿ, ಇವಳ ಬೆನ್ನೆಲುಬಾಗಿ, ಇವಳ ಸಂಗಾತಿಯಾಗಿ ....... ಕಾಣದ, ನಂಬದ ದೇವರಿಗೆ ಬೇಡಿಕೊಂಡ "ಇವಳು ಇಲ್ಲೇ ಇರಲಿ, ಜೊತೆಯಿರಲಿ"
ಒಂದು ಕ್ಷಣ ಅವನ ಅಪ್ಪುಗೆಯಲ್ಲಿ ಮೈಮರೆತಳು, ಎದೆಯಲ್ಲೂ ಹುದುಗಿಸಿಟ್ಟಿಕೊಂಡ ಅದೆಷ್ಟೋ ದಿನದ ನೋವು ಕಣ್ಣ ಹನಿಯಾಗಿ ಜಾರಿ ಅವಳ ಕೈ ಮೇಲೆ ಬಿದ್ದಾಗಲೇ ಎಚ್ಚರವಾಗಿದ್ದು. "ಅದು ಹೇಗೆ ಒಂದು ಅಪ್ಪುಗೆಯಲ್ಲಿ ಇಷ್ಟು ದಿನದ ಅಗಲಿಕೆ, ನೋವು, ನಮ್ಮ ಮಧ್ಯ ಇರುವ ಭಿನ್ನಾಭಿಪ್ರಾಯಗಳನ್ನು ಮರೆಯಲಿ" ಎಂದಿತು ಅವಳ ಮನ. ಆದರೂ ಇನ್ನೊಂದು ಕ್ಷಣ ಅವನ ಅಪ್ಪುಗೆಯಲ್ಲಿದ್ದಳು.
ನಿಧಾನವಾಗಿ ದೂರ ಸರಿಯಲು ಶುರು ಮಾಡಿದಳು, ಅನಿರುದ್ಧನಿಗೆ ಅವಳನ್ನು ಬಿಡಲು ಮನಸ್ಸಿಲ್ಲ. ಆದರೆ ಅವಳನ್ನು ಒತ್ತಾಯಿಸಲು ಹೆದರಿದ.
ದೂರ ಸರಿದು ನಿಂತ ಮೇಲೆ ಶ್ರಾವ್ಯಳಿಗೆ ತಾನು ಏನು ಹೇಳಬೇಕು, ಹೇಗೆ ಹೇಳಬೇಕು ಅಂತ ಯೋಚಿಸುತ್ತಿರುವಾಗಲೇ ಅವನು ಹೇಳಿದ "ಶ್ರಾವಿ ಐ ಸ್ಟಿಲ್ ಲವ್ ಯು"
ಅವನನ್ನೇ, ಅವನ ಕಣ್ಣನ್ನೇ ದಿಟ್ಟಿಸಿ ನೋಡಿದವಳಿಗೆ ಕಂಡಿದ್ದು, ಒಂದು ಸಾಗರದಷ್ಟು ಪ್ರೀತಿ. ಆದರೆ ಅದರ ಮಾಯೆಯೊಳಗೆ ಸಿಲುಕಬಾರದು ಎನ್ನುವಂತೆ ನಿರ್ಧರಿಸಿದವಳು ಹೇಳಿದಳು "ನಂಬ್ತೀನಿ ಆದರೆ ನಮ್ಮ ಯೋಚನೆ ಇನ್ನು ಬದಲಾಗಿಲ್ಲ, ನೀನು ಹಾರಬೇಕು ಅಂತ ಆಸೆ ಪಡುವವನು, ನಾನು ಬೇರುರಬೇಕು ಅಂತ ಕನಸು ಕಂಡವಳು... "
"ಶ್ರಾವಿ..."
"ಇಲ್ಲಾ ಅನಿ, ನನ್ನ ಮಾತು ಪೂರ್ತಿ ಕೇಳು. ನಿನ್ನ ಆಸೆ ತಪ್ಪಲ್ಲ, ನೀನು ಅದಕ್ಕಾಗೆ ಹುಟ್ಟಿದವನು, ರೆಕ್ಕೆ ಬಿಚ್ಚಿ ಹಾರದೆ ಹೋದ್ರೆ ನಿನಗೆ ಉಸಿರುಗಟ್ಟುತ್ತೆ, ನನಗೆ ಈಗ ಅದು ಅರ್ಥವಾಗಿದೆ. ನಿನ್ನೊಂದಿಗೆ ನಾನು ಹಾರಬೇಕಿತ್ತೇನೋ ಅಂತ ಎಷ್ಟು ಸಾರಿ ಅನಿಸ್ತು ಗೊತ್ತಾ.. ಆದ್ರೆ ನನ್ನ ಕನಸು ಅದಲ್ಲ, ನನಗೆ ಮನೆ ಬೇಕು, ನನ್ನದು ಅಂತ ಬೇರೂರಲು ಒಂದು ಬದುಕು ಕಟ್ಟಬೇಕು. ಐ ಲವ್ ಯು ಟು ಅನಿ, ಆದ್ರೆ ...."
"ನನಗೆ ಅದೇ ಬೇಕು. "
"ವಾಟ್?!
'ಶ್ರಾವಿ ನೀನಿಲ್ಲದೆ ಇರೋ ಈ ಗೆಲುವು, ಎತ್ತರ, ದುಡ್ಡು, ಹುದ್ದೆ, ಇದ್ಯಾವುದಕ್ಕೂ ಅರ್ಥವಿಲ್ಲ. ... "
"ಇಲ್ಲ ಅನಿ ಈಗ ನಿನಗೆ ಹಾಗನಿಸುತ್ತೆ ಆದ್ರೆ ಕೊನೆಗೆ ನೀನು ನನ್ನ ದ್ವೇಷಿಸೋಕೆ ಶುರು ಮಾಡ್ತಿಯ. ಇಲ್ಲ ಇದು ಆಗೋಲ್ಲ. ನೀನು ಇಲ್ಲಿಂದ ಹೋದ ಮೇಲೆ ನಿನಗೆ ಹಾಗನಿಸೋಲ್ಲ. ಈಗ ನಾನು ನಿನ್ನೆದುರು ಇರೋದಕ್ಕೆ ನಿನಗೆ ಹಾಗನಿಸ್ತಿದೆ ಅಷ್ಟೇ. ಇಟ್ಸ್ ಓಕೆ ಕಣೋ, ಎಲ್ಲಾ ಪ್ರೀತಿಗಳು ಒಂದಾಗಿರೋಲ್ಲ. ಒಂದಾಗಿದ್ರೆ ಮಾತ್ರ ಪ್ರೀತಿ ಅಲ್ಲ. ಹಾಗೇನೆ ಒಬ್ಬರ ಸಂತೋಷಕ್ಕೆ ಇನ್ನೊಬ್ಬರ ಸಂತೋಷ ಹಾಳು ಮಾಡೋದನ್ನ ಪ್ರೀತಿ ಅನ್ನೋಲ್ಲ.. ಅದು ಸ್ವಾರ್ಥ ಅಷ್ಟೇ..... "
"ಅಬ್ಬ ಸ್ವಲ್ಪ ಸುಮ್ಮನಿದ್ದು ನನ್ನ ಮಾತು ಪೂರ್ತಿಯಾಗಿ ಕೇಳ್ತೀಯಾ. !!?"
ಅವನ ಏರು ಧ್ವನಿ, ಅವನ ಕಣ್ಣಲ್ಲಿ ಕಾಣುತ್ತಿದ್ದ ಅಸಹನೆ ಕಂಡು ಒಮ್ಮೆ ಸಿಟ್ಟೇರಿದರು, ಅದನ್ನ ಅದುಮಿಟ್ಟುಕೊಂಡು ಅಲ್ಲೇ ಇದ್ದ ಕುರ್ಚಿಯಲ್ಲಿ ಕೂತು ಕೈ ಕಟ್ಟಿ "ಹೇಳು" ಅನ್ನುವಂತೆ ನೋಡಿದಳು.
"ನೋಡು ಯಾರು ಯಾರಿಗಾಗಿಯೂ ತ್ಯಾಗ ಮಾಡುವ ಅಗತ್ಯವಿಲ್ಲ. ಈ ಸ್ವಾರ್ಥ, ಸಂತೋಷ, ತ್ಯಾಗ, ದ್ವೇಷ.. ಇಷ್ಟೆಲ್ಲಾ ದೊಡ್ಡ ಪದಗಳನ್ನ ಬಿಡು. ಸರಳವಾಗಿ ಹೇಳೋದನ್ನ ಕೇಳು"
"ನಾ ಹೇಳ್ತಾ ಇರೋದು..."
ದಡದಡನೆ ಅವಳೆಡೆಗೆ ನೆಡೆದು ಬಂದು ಅವಳಿದ್ದ ಕುರ್ಚಿ ಕೈಗಳನ್ನು ಹಿಡಿದು ಬಾಗಿ ಮೆಲ್ಲಗೆ ನುಡಿದ "ಚುಪ್"
ಅವನ ರಭಸ, ಸಾಮಿಪ್ಯ ನೋಡಿ ಹಿಡಿದಿಟ್ಟ ಉಸಿರನ್ನು ಬಿಡಲು ಹೋಗಲಿಲ್ಲ ಶ್ರಾವ್ಯ..
ಮೆಲ್ಲಗೆ ಎದ್ದವನು ಒಂದು ದೀರ್ಘ ಉಸಿರೆಳೆದು ಅವಳಿಗೆ ಬೆನ್ನು ಹಾಕಿ ನಿಂತು ಹೇಳಿದ "ಶ್ರಾವ್ಯ, ಹಾರೋ ಆಸೆ ಇರೋ ಹಕ್ಕಿಗೂ ಒಂದು ಗೂಡು ಬೇಕು. ಬೆಳಗ್ಗೆ ಸೂರ್ಯನ ಹಿಡಿಯಲು ಹೋದ ಹಕ್ಕಿಗೆ ರಾತ್ರಿ ಸುಸ್ತಾದಾಗ ವಾಪಸ್ ಬರೋದು ತನ್ನ ಗೂಡಿಗೆ. ಹಾರೋ ಹುಮ್ಮಸ್ಸಿನಲ್ಲಿ ನಾನು ಗೂಡು ಕಟ್ಟೋದೇ ಮರೆತೆ. ಗೂಡು ಕಟ್ಟೋಕೆ ಬಂದವಳನ್ನು ದೂರ ಮಾಡಿದೆ. ೩ ವರ್ಷವಾಯಿತು ನಾವಿಬ್ಬರು ದೂರವಾಗಿ. ಈ ಕಂಪನಿ ಬಿಟ್ಟು ನನಗೆ ಬೇರೆ ಕಡೆಯಿಂದ ಬೇಕಾದಷ್ಟು ಆಫರ್ಸ್ ಬಂದಿದ್ವು. ಆದ್ರೆ ನೀನಿನ್ನು ಇಲ್ಲೇ ಇದ್ಯಾ ಅಂತಾ ನಾನು ಈ ಜಾಗ ಬಿಡಲಿಲ್ಲ. ಹಾ ನನಗೆ ನಾನು ಸಬೂಬು ಹೇಳಿದ್ದು ಒಂದೆ ಜಾಗದಲ್ಲಿ ಬೆಳೆಯೋದು ಒಳ್ಳೆ ನಿರ್ಧಾರ ಅಂತ. ಆದ್ರೆ ಸತ್ಯ ಅದಾಗಿರಲಿಲ್ಲ. ನೀನು ಜೋತೆಗಿಲ್ಲದಿದ್ರು, ನೀನಿರೋ ಜಾಗವನ್ನೇ ಗೂಡು ಮಾಡಿಕೊಂಡೆ. ನೀನು ಬೇಡ ಅಂತ ನಿರ್ಧರಿಸಿದ ಮೇಲೂ ನಿನ್ನ ವಿಷಯ ತಿಳಿಯೋಕೆ ಹಪಹಪಿಸಿದೆ. ಈ ಪ್ರಾಜೆಕ್ಟ್ ತಗೊಂಡಾಗ ನಿನ್ನ ಎದುರಿಸಿ ಜೈಯಿಸಬೇಕು ಅನ್ನೋ ಹುಚ್ಚು ಯೋಚನೆ. ಆದ್ರೆ ನಿನ್ನ ನೋಡಿದ ಮೇಲೆ ಈ ೩ ವರ್ಷ ನನಗೆ ನಾನು ಎಷ್ಟು ಸುಳ್ಳು ಹೇಳಿಕೊಂಡೆ ಅನ್ನೋ ಅರಿವಾಗಿದ್ದು.
ಐ ಲವ್ ಯು.... ಇದಕ್ಕಿಂತ ಹೆಚ್ಚು ಇನ್ನೇನು ಇಲ್ಲ. ನೀನು ನನಗೆ ಬೇಕು, ಈಗಲ್ಲ ಇನ್ನು ಎಷ್ಟು ವರ್ಷವಾದರೂ ಬೇಕು, ಎಲ್ಲಿ ಹೋದರು ಬೇಕು. ಈಗ ನೀನು ಬೇಡವೆಂದರು ನನಗೆ ನೀನು ಬೇಕು. ಈ ಬೇಕು ಅನ್ನುವ ಭಾವ ಎಂದು ಮುಗಿಯೊಲ್ಲ. ನೀನು ಏನು ನಿರ್ಧಾರ ಬೇಕಾದ್ರೂ ತಗೋ, ಆದ್ರೆ ಕೊನೆಗೆ ನಿನಗೂ ನಾನು ಬೇಕು ಅನ್ನುವ ತನಕ ನಾನು ಇದನ್ನ ಹೇಳೋದು ನಿಲ್ಲಿಸೋಲ್ಲ, ನೀನು ಹೇಳಿದ ಮೇಲು ನಿಲ್ಲಿಸೋಲ್ಲ.. ನೀನು ನನಗೆ ಬೇಕು..."
ಒಂದೆ ಉಸಿರಿಗೆ ಎಲ್ಲಾ ಹೇಳಿ ಮುಗಿಸಿದವನಿಗೆ ಅವಳೆಡೆಗೆ ತಿರುಗಲು ಧೈರ್ಯ . ಅವಳಿಂದ ಒಂದೆ ಒಂದು ಮಾತು ಬರದಿದ್ದನ್ನು ನೋಡಿ, ತಿರಸ್ಕಾರ ತುಂಬಿದ ಅವಳ ಕಣ್ಣನ್ನು ನೋಡಲು ಇಚ್ಚಿಸದೆ ಬಾಗಿಲೆಡೆಗೆ ಹೆಜ್ಜೆ ಎತ್ತಿದ....
ಅಷ್ಟರಲ್ಲಿ ಮಧುವಾದ ಮೇಲು ಧ್ವನಿಯಲ್ಲಿ ನುಡಿದಳು "ನನಗೂ ನೀ ಬೇಕು..."

ನಾನು ಜಸ್ಟ್ ಒಂದು ಲೆಕ್ಕಾನ. ಬೇಕಾದಾಗ ಕೂಡ್ಸೊದು ಇಲ್ಲಾಂದ್ರೆ ಭಾಗಿಸೋದಾ
ಪ್ರತ್ಯುತ್ತರಅಳಿಸಿಈ ಸಾಲು ಲೇಖನಕ್ಕೆ ಅಡಿಪಾಯವಾಗಿದೆ. ಗೆಳೆತನ, ಪ್ರೀತಿ, ಪ್ರೇಮ, ಅಭಿಮಾನ ಎಲ್ಲವೂ ಈ ಸಾಲುಗಳಲ್ಲಿ ತುಂಬಿದೆ. ಕೂಡೋದು, ಭಾಗಿಸೋದು ಈ ಅಂಶದಿಂದ ಶುರುವಾಗುವ ಕಥೆ.. ಕೂಡಿಸೋದು, ಗುಣಿಸೋದು ಎನ್ನುವ ಹಂತಕ್ಕೆ ಬಂದು ನಿಲ್ಲುತ್ತದೆ.. ಕೊಡುತ್ತಲೇ ಹೋಗೋಣ.. ಆಗ ಸುಖ ಸಂತೋಷ ವೃದ್ಧಿಯಾಗುತ್ತದೆ ಎನ್ನುವ ಇಬ್ಬರ ಅಂತಿಮ ನಿರ್ಧಾರ ಖುಷಿಕೊಡ್ತು.
ಮೊದಲು ತೊಳಲಾಡುವುದು ಉಷಾಳೇ ಆದರೂ... ಅದಕ್ಕಿಂತ ಹೆಚ್ಚಿನ ತೊಳಲಾಟದಲ್ಲಿ ಶ್ರಾವ್ಯ ಇರುತ್ತಾಳೆ. ಅನಿರುದ್ಧ್ ಕೂಡ ಹೊರತೇನೂ ಅಲ್ಲ..
ಎಲ್ಲಾ ಎಳೆಗಳನ್ನೂ ಸಮರ್ಥವಾಗಿ ಪಾಕ ಹುಯ್ದು ಅಕ್ಷರಶಃ ಬೆಲ್ಲದ ಪಾಕ ಮಾಡಿರುವ ಅಂತ್ಯಕ್ಕೆ ಶಭಾಷ್ ಎನ್ನಲೇ ಬೇಕು
ಸೂಪರ್ ಸಿಬಿ ಸ್ಪೆಷಲ್ ಮತ್ತೆ ಬಂದಿದೆ