ಹಾಯ್ ಬೆಳಗು - ನಿವ್ಸ್

ಮೊದಲನೆಯ ಭಾಗವನ್ನು ಇಲ್ಲಿ ಓದಿ

ಕಾರ್ಖಾನೆಯ ಮುಂದೆ ಲಕ್ಷಾಂತರ ಜನರು ತುಂಬಿರುವುದನ್ನು ನೋಡಿ ರೂಪಕ್ಕ ಒಮ್ಮೆ ಅವಕ್ಕಾದರು. ಆದರೆ ಎಂತಹ ಪರಿಸ್ಥಿತಿಗೂ ಹಿಂಜರಿಯದೆ ಮುನ್ನುಗುವ ಅವರ ಮನಸ್ಸು ಸಮಾಧಾನಿಸಿತು. ಮೈಕಿನಲ್ಲಿ ಯಾರೋ ಮಾತಾಡ್ತಾ ಇರೋ ಧ್ವನಿ ಕೇಳಿಸಿತು.
"......... ಅದ್ದರಿಂದ ನನ್ನ ಮಾತನ್ನು ನಂಬಿ ನಾವು ಬೇಧ ಭಾವ ತೋರಿಸುತ್ತಿಲ್ಲ. ಇದರಲ್ಲಿ ನಮ್ಮದೇನು ಕೈವಾಡವಿಲ್ಲ. ಯಾವುದು ಹೇಗೆ ನಡೆಯಬೇಕು ಅನ್ನೋದನ್ನು ನಾವು ನಿರ್ಧರಿಸಿಲ್ಲ"

ರೂಪಕ್ಕ ಪುಷ್ಪಕ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆ ಜನರ ಗಮನ ಇವರ ಕಡೆ ತಿರುಗಿ ಇವರಿಗೆ ದಾರಿ ಬಿಡಲು ಶುರು ಮಾಡಿದರು. ಆಶ್ಚರ್ಯವಾದರೂ ಅದನ್ನು ತೋರ್ಪಡಿಸದೆ ಮುಗುಳ್ನಗೆಯಿಂದಲೇ ಮುನ್ನೆಡೆದರು. ಕಾರ್ಖಾನೆಯ ಮಾಲೀಕ ಇವರನ್ನು ನೋಡಿ ಒಂದು ದೊಡ್ಡ ಸಮಾಧಾನದ ನಗೆ ಬೀರಿ ಇವರನ್ನು ಆಹ್ವಾನಿಸಿದರು. 

"ನೋಡಿ ನಿಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡೋದಕ್ಕೆ ಸ್ವತಃ ರೂಪಾರವರೆ ಇಲ್ಲಿ ದಯ ಮಾಡಿಸಿದ್ದಾರೆ. ಇನ್ನು ನೀವು ನಿಮ್ಮ ಸಮಸ್ಯೆಯನ್ನು ಅವರೊಂದಿಗೆ ಹೇಳಬಹುದು."

ಒಮ್ಮೆಲೇ ಎಲ್ಲಾ ಕಡೆಯಿಂದ ಧ್ವನಿ. "..ಇದು ಮೋಸ ರೂಪಕ್ಕ " "ನಾವೇನು ತಪ್ಪು ಮಾಡಿದ್ದೀವಿ.." "ನಮಗೂ ಬೇಡವೆ".......

ರೂಪಕ್ಕೆ ಅಧಿಕಾರಯುತವಾಗಿ ಎಲ್ಲರಿಗೂ ಪ್ರಿತಿಯಿಂದಲೇ ಹೇಳಿದರು "ಶಾಂತರಾಗಿ, ಹೀಗೆ ಒಮ್ಮೆಲೇ ಎಲ್ಲಾರು ಮಾತಾಡಿದರೆ ಹೇಗೆ ಉತ್ತರಿಸುವುದು. ದಯವಿಟ್ಟು ನಿಮ್ಮ ಸಮಸ್ಯೆ ಏನು ಅನ್ನೋದನ್ನು ಸಮಾಧಾನವಾಗಿ ಹೇಳಿ "

ಎಲ್ಲರ ಪರವಾಗಿ ಒಬ್ಬರು ಮುಂದೆ ಬಂದು ವಿವರಿಸಿದರು "ಸಮಸ್ಯೆ ಇಷ್ಟೇ ರೂಪಕ್ಕ. ನಮಗೆಲ್ಲ ದಿನದಲ್ಲಿ ೨೪ ಗಂಟೆ ಮಾತ್ರ ಸಿಗುತ್ತೆ. ಅದರಲ್ಲೇ ಕೆಲಸ, ಮನೆ, ಸ್ನೇಹಿತರು, ಫೆಸ್ಬುಕ್, ವಾಟ್ಸಾಪ್, ಓಡಾಟ ... ಇತ್ಯಾದಿ ಎಲ್ಲಾ ಆಗಬೇಕು. ಆದರೆ ಅದು ಎಂದು ಸಾಧ್ಯವಾಗೋಲ್ಲ, ಸಿಗೋ ಭಾನುವಾರ ಕೂಡ ಮನೆಲ್ಲಿ ತಣ್ಣಗೆ ಇದ್ದಾರೆ ಸಾಕು ಅನ್ಸುತ್ತೆ. ಆದರೆ ಈ ಕಂಪನಿಯವರು ನಿಮಗೆ ಮಾತ್ರ ಬೇರೆ ಗಡಿಯಾರ ಮಾಡಿದ್ದಾರೆ, ಅದಕ್ಕೆ ನಿಮಗೆ ಮಾತ್ರ ದಿನದಲ್ಲಿ ನಿಮಗೆ ಬೇಕಾದಷ್ಟು ಗಂಟೆ ಸಿಗುತ್ತೆ. ಅಥವಾ ನಿಮಗೆ ಬೇಕಾದಾಗ ಅದು ಬೇಗ ಹಾಗು ನಿಧಾನವಾಗಿ ಚಲಿಸಿ ನಿಮಗೆ ಸಹಾಯ ಮಾಡುತ್ತೆ. ಅದಕ್ಕೆ ನಮಗೂ ಆ ತರಹದ ವಿಶಿಷ್ಟವಾದ ಗಡಿಯಾರ ಮಾಡಿಕೊಡಿ ಇದೆ ನಮ್ಮ ಬೇಡಿಕೆ"

ಇದನ್ನು ಕೇಳಿದ ರೂಪಕ್ಕ ಆಶ್ಚರ್ಯದ ನಗು ಹಾಗೆಯೇ ಹೇಗೆ ಅರ್ಥ ಮಾಡಿಸಬೇಕು ಎನ್ನುವ ಪ್ರಶ್ನೆ. ಬಹಳ ಸಮಾಧಾನವಾಗಿ ಅವರು ಹೇಳಿದರು "ನೋಡಿ ನನ್ನ ಗಡಿಯಾರಕ್ಕೂ ನಿಮ್ಮ ಗಡಿಯಾರಕ್ಕೂ ಏನು ವ್ಯತ್ಯಾಸವಿಲ್ಲ. ನನಗೂ ನಿಮ್ಮ ಹಾಗೆ ೨೪ ಗಂಟೆ ಮಾತ್ರ ಸಿಗುವುದು. ದಯವಿಟ್ಟು ನೀವು ತಪ್ಪು ತಿಳಿದುಕೊಂಡು ಹೀಗೆ ಇವರಿಗೆ ತೊಂದರೆ ಕೊಡಬೇಡಿ."

ಇಷ್ಟೆಲ್ಲಾ ಕೇಳ್ತಾ ಇದ್ದ ನಾರದ ಮುನಿಗಳು ಎಂದಿನ ಹಾಗೆಯೇ ಮಧ್ಯ ಬಾಯಿ ಹಾಕಿದರು "ಮಹನೀಯರೇ, ರೂಪಕ್ಕ ಎಂದೂ ಎಲ್ಲೇ ಮೀರಿ ನಿಮಗೆ ಉಪದೇಶ ಮಾಡೋಲ್ಲ. ಅದಕ್ಕೆ ಅವರ ಪರವಾಗಿ ನಾನು ಎರಡು ಮಾತನ್ನು ಹೇಳಲು ಬಯಸುತ್ತೇನೆ. ನೀವೆಲ್ಲ ಸಮಯವನ್ನು ಗಂಟೆ, ನಿಮಿಷದ ವ್ಯಾಪ್ತಿಯಿಂದ ನೋಡಿದರೆ ಇವರು ಅದನ್ನು ಕ್ಷಣಗಳಲ್ಲಿ ವ್ಯವಹರಿಸುತ್ತಾರೆ. ನಿಮಗೆ ನಿಮ್ಮ ಸ್ವಂತ ಸುಖ ಸಂತೋಷದಲ್ಲಿ ಎಷ್ಟು ಸಮಯ ಕಳಿಯುತ್ತೇನೆ ಅನ್ನುವ ಲೆಕ್ಕಾಚಾರ, ಇವರಿಗೆ ಅಯ್ಯೋ ಇಷ್ಟೆಲ್ಲಾ ಸಮಯ ನನಗೆ ಉಪಯೋಗಿಸೋ ಬದಲು ಇವರಿಗೆ ಉಪಯೋಗಿಸಬಹುದಲ್ಲ ಅನ್ನುವ ಲೆಕ್ಕಾಚಾರ. ನಿಮ್ಮ ಯೋಚನೆಗಳು ನಾನು, ನನ್ನದು, ನನ್ನವರು ಎನ್ನುವ ಮಟ್ಟಿಗೆ ಸೀಮಿತವಾಗಿದ್ದರೆ, ಇವರು ಅವರು, ಇವರು, ಜಗತ್ತಿನವರು ಎನ್ನವ ಹಂತಕ್ಕೆ ಬೆಳೆಯುತ್ತೆ. ಇವರು ಸಮಯಕ್ಕೆ ಕೊಡುವ ಬೆಲೆಯನ್ನು ನೋಡಿ ಸಾಕ್ಷಾತ್ ಆ ಭಗವಂತ ಇವರಿಗೆ ಎಲ್ಲರ ಪ್ರೀತಿ ಪ್ರೇಮ ಅಭಿಮಾನ ದೊರಕುವಂತೆ ಮಾಡಿದ್ದಾನೆ. ಇನ್ನು ಇಂತಹ ಆತ್ಮವನ್ನು ಪ್ರೀತಿಸಲು ಅರಿಯದವರಿಗೆ ಪ್ರೀತಿಯ ಅರ್ಥವೇ ಗೊತ್ತಿಲ್ಲ ಎಂದರೂ ಅದು ಅತಿಶಯವಲ್ಲ."

ಅಷ್ಟರಲ್ಲಿ ರೂಪಕ್ಕ "ಅರೆ ಸಾಕು ಸಾಕು ನನ್ನ ಗುಣಗಾನ, ನಾರದರೆ ನಿಮಗೆ ಇನ್ಯಾರು ಸಿಕ್ಕಿಲ್ವ ತಮಾಷೆ ಮಾಡೋಕೆ. ನೋಡಿ ಎಲ್ಲಾರು ಆಗಲೇ ಎಷ್ಟು ಸಮಯ ವ್ಯರ್ಥ ಮಾಡಿದ್ದೀರಿ. ಈಗ ಇನ್ನು ಸಮಯ ಹಾಳು ಮಾಡದೆ ಹೋಗಿ ನಿಮ್ಮ ನಿಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿ"

ಇಷ್ಟು ಹೇಳಿ ನಾರದರ ಕಡೆ ತಿರುಗಿ ಅಂದರು "ಆರೇ ನೋಡಿ ಇನ್ನು ೧೦ ನಿಮಿಷ ಉಳಿದಿದೆ. ಇಲ್ಲೇ ಇರಿ ಗುಂಪಿನಲ್ಲಿ ಒಬ್ಬರನ್ನು ನೋಡಿದೆ ಮಾತಾಡಿಸಿ ಈಗ ಬಂದು ಬಿಡುವೆ"

ನಗುತ್ತ ಮೂಲೆಯಲ್ಲಿ ಸ್ವಲ್ಪ ಅಡಗಿ ನಿಂತ ವ್ಯಕ್ತಿಯನ್ನು ಮನಪೂರ್ವಕವಾಗಿ ಮಾತಾಡಿಸುತ್ತಿದ್ದ ರೂಪಕ್ಕನನ್ನು ನೋಡುತ್ತಾ ನಾರದರು ಮನದಲ್ಲೇ

"ನಿಮ್ಮನ್ನು ಭೇಟಿ ಮಾಡಿದ ವ್ಯಕ್ತಿಗಳೆಲ್ಲ ಅದೇನೋ ಪುಣ್ಯ ಮಾಡಿರಬೇಕು ಅದಕ್ಕೆ ನಿಮ್ಮಂತಹ ವ್ಯಕ್ತಿಯೊಂದಿಗೆ ಕೆಲವು ಕ್ಷಣಗಳನ್ನು ಹಂಚಿಕೊಳ್ಳುವ ಭಾಗ್ಯ ಸಿಕ್ಕಿದೆ. ಇಂತಹ ನಾಯಕಿ, ಇಂತಹ ಸ್ನೇಹಿತೆ, ಇಂತಹ ತಾಯಿ, ಇಂತಹ ವ್ಯಕ್ತಿತ್ವವನ್ನು ಪಡೆಯುವುದು ಸುಲಭದ ಮಾತಲ್ಲ. ಹುಟ್ಟು ಹಬ್ಬದ ಶುಭಾಷಯಗಳು ನಿಮಗೆ. ನೀವು ಆಶಿಸಿದ್ದು ನಿಮಗೆ ಸಿಗಲಿ, ನಿಮ್ಮ ಗುರಿ ನೀವು ತಲುಪುವಂತಾಗಲಿ"   ಎಂದು ಹರಸಿದರು. 

ಕಾಮೆಂಟ್‌ಗಳು

  1. ಸಮಯದ ಹೊಂದಾಣಿಕೆ ಮತ್ತು ಅದರ ಸದುಪಯೋಗ ರೂಪಾ ಅವರಿಂದ ಕಲಿಯಬೇಕು.

    ಅವರದು ಅಚ್ಚುಕಟ್ಟಾದ ಬಾಳ್ಮೆ, ನಲ್ಮೆ ಮತ್ತು ನೆಯ್ಗೆ.

    ಅವರು ನಿರ್ವಹಿಸಿದ ಪಾತ್ರ ವೈವಿದ್ಯದಲ್ಲೂ ನಿರ್ವಹಣೆ ಅಚ್ಚುಕಟ್ಟು. ಪಟ್ಟಿ ಮಾಡಿದರೆ, ಮಕ್ಕಳಲ್ಲಿ ಮಗು, ತ್ರೀಕೆ ಅಧಿನಾಯಕಿ, ಪ.ಚಿಂ ನಿರ್ವಾಹಕಿ, ಕವಿಯತ್ರಿ, ಬ್ಲಾಗಿಣಿ..

    ಹೀಗೆ..

    ರೂಪಾಜಿ ತಮಗಿದೋ ಜನುಮದಿನದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಅಬ್ಬಬ್ಬ ಬಹಳ ಚೆನ್ನಾಗಿದೆ ಪ್ರಸ್ತಾವನೆ ಮೊದಲನೇ ಭಾಗ, ಬಹುಷಃ roopa ಸತೀಶ್ ಗಡಿಯಾರದಲ್ಲಿ ದಿನಕ್ಕೆ ೪೮ ಘಂಟೆ ಇರಬೇಕು , ಇಷ್ಟಾ ಆಯ್ತು , ಈ ಮೊದಲ ಲೇಖನ

    ಪ್ರತ್ಯುತ್ತರಅಳಿಸಿ
  3. ಅರೆ ಪ್ರಸ್ತಾವನೆಯ ಎರಡನೇ ಭಾಗ ಅಂತಾ ಬರೆಯಲು ಹೋಗಿ ಮೊದಲನೇ ಭಾಗ ಅಂತಾ ಆಗಿದೆ, ಶ್ರೀಕಾಂತ್ ಮಂಜುನಾಥ್ ಬರೆದ ಮೊದಲನೇ ಭಾಗಕ್ಕೆ ತಕ್ಕಂತೆ ಎರಡನೇ ಭಾಗ ಬಂದಿದೆ . ನಿಜಾ ರೂಪಾ ಸತೀಶ್ ಗಡಿಯಾರದಲ್ಲಿ ದಿನಕ್ಕೆ ೪೮ ಘಂಟೆ ಇರೋದು ನಿಚ್ಚಳವಾಯ್ತು , ನಮ್ಮೆಲ್ಲರ ಕಡೆಯಿಂದ ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು