ನೆನಪುಗಳ ಮಾತು ಮಧುರ

ಹೊರಡಲು ತಯಾರಾಗುತ್ತಿದ್ದ ರಾಗಿಣಿಯ ಮೊಬೈಲಿನಿಂದ ವಾಟ್ಸ್‌ಆಪ್ ಕೂಗಿತು. ರಕ್ಷಾಳ ಮೆಸೇಜು -

"ದೇವಸ್ಥಾನಕ್ಕೆ ಹೋಗಲು ರೆಡಿನಾ??"
"ಸಾರಿ ಕಣೆ. ನಾನು ಬರೋಕೆ ಆಗಲ್ಲ. ಅಪ್ಪಾಜಿನ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕು"
"ರಾತ್ರಿ ತೊಂದರೆ ಮಾಡಿದ್ರಾ?"
"ಹೌದು. ಈಗ ೧೦ ಗಂಟೆಗೆ ಅಪಾಯಿಂಟ್ಮೆಂಟ್  ಕೊಟ್ಟಿದ್ದಾರೆ ಡಾಕ್ಟರ್"
"ಸರಿ ಹಾಗಾದ್ರೆ"
"ಬೈ"

ಫೋನ್ ಹಾಸಿಗೆ ಮೇಲೆ ಎಸೆದು ಒಂದು ಕ್ಷಣ ಸುಮ್ಮನೆ ಕೂತಳು ರಾಗಿಣಿ. ತಲೆಯಲ್ಲಿ ನೂರೊಂದು ಯೋಚನೆ. ಇವತ್ತು ರಜ ಹಾಕುವ ಸ್ಥಿತಿಯಲ್ಲಿರಲಿಲ್ಲ ಅವಳು. ಆದರೆ ಅನಿವಾರ್ಯ. ಅಪ್ಪನಿಗಿಂತ ಬೇಗ ವೃದ್ಧಿಯಾಗ್ತಾ ಇರುವ ಅವರ ಆಲ್ಜೈಮರ್ಸ್ ಇವಳನ್ನು ಮಾನಸಿಕವಾಗಿ ಹೆಚ್ಚು ಕುಗ್ಗಿಸುತ್ತಿತ್ತು. ಅದರ ಮೇಲೆ ಖರ್ಚುಆಸ್ಪತ್ರೆಔಷಧಿಗಳನ್ನು ನಿಭಾಸಲು ಕತ್ತೆ ಚಾಕರಿ ಮಾಡಲೇಬೇಕು. ಇಷ್ಟವಿಲ್ಲದ ಕೆಲಸಸಹಿಸಲಾಗದ ಭಾವನೆಎದುರು ನೋಡದೆ ಬದುಕುತ್ತಿರುವ ದಿನಗಳುವಯಸ್ಸು ೨೬ ಆದರೆ ೭೦ರ ವೈರಾಗ್ಯ.

"ಥತ್ ಈ ಯೋಚನೆಗಳಿಗೆ ತಲೆ ಕೊಟ್ಟರೆ ಈ ದಿನ ಇಲ್ಲೆ ಕಳೆದು ಹೋಗುತ್ತೆ" ಅಂತ ತಲೆ ಕೊಡುವಿಕೊಂಡಳು ರಾಗಿಣಿ. ಅಪ್ಪನನ್ನು ಕೂಗ್ತಾನೆ ಮೆಟ್ಟಿಲಿಳಿದಳು. ಅಷ್ಟರಲ್ಲಿ ಬಾಗಿಲ ಕರೆಗಂಟೆ ತನ್ನ ಕರ್ಕಶ ಧ್ವನಿಯಲ್ಲಿ ಹಾಡಿತು.

"ಹೊರಡಬೇಕು ಈಗಅಪ್ಪ ಇನ್ನು ರೆಡಿಯಾಗಿಲ್ಲ ಅಷ್ಟರಲ್ಲಿ ಯಾರಪ್ಪ ಬಂದಿದ್ದು?" ಗೊಣಗ್ತಾನೆ ಬಾಗಿಲು ತೆರೆದಳು. ಎದುರಿಗೆ ದೇವರಂತೆ ಪ್ರತ್ಯಕ್ಷವಾಗಿದ್ದಳು ರಕ್ಷಾ.

"ನಾನಿಲ್ಲೆ ನಿಮ್ಮನೆ ಹತ್ರಾನೆ ಬಂದಿದ್ದೆ. ನಿಂಗೆ ಏನಾದ್ರೂ ಸಹಾಯ ಬೇಕಾಗಬಹುದು ಅಂತ ಇಲ್ಲೆಗೆ ಬಂದೆ. ರೆಡಿನಾ ನೀವು?" ಮುಗುಳ್ನಗ್ತಾ ಕೇಳಿದಳು ರಕ್ಷಾ.

ತಾನು ಒಂಟಿ ಎಂದು ತಿಳಿದಾಗಲೆಲ್ಲಾನಾನಿದ್ದೀನಿ ಅಂತ ಎದುರು ಬರುವ ತನ್ನ ಏಕೈಕ ಜೀವದ ಗೆಳತಿಯನ್ನು ನೋಡಿರಾಗಿಣಿಗೆ ಅಂದು ಅಳು ತಡೆಯಲಾಗಲಿಲ್ಲ.

ಕಣ್ಣಾಲಿಗಳು ತುಂಬಿ ತುಳುಕಲು ಶುರು ಮಾಡಿದಾಗ ರಕ್ಷಾ ಗಾಬರಿಯಿಂದಲೇ ಕೇಳಿದಳು "ಅರೆ ಏನಾಯ್ತೆ? ಯಾಕೆ ಈ ಅಳು. ಅಪ್ಪನ ಸ್ಥಿತಿ ಅಷ್ಟು ಗಂಭೀರವಾಗಿದ್ಯಾ?"

ರಕ್ಷಾಳನ್ನು ಅಪ್ಪಿಕೊಂಡು ಜೋರಾಗಿ ಅಳಲು ಶುರು ಮಾಡಿದಳು ರಾಗಿಣಿ. ರಕ್ಷಾ ಇವಳನ್ನು ನಿಧಾನವಾಗಿ ಮನೆಯೊಳಗೆ ಕರೆತಂದು ಸೋಫಾದ ಮೇಲೆ ಕೂರಿಸಿ ಕೇಳಿದಳು. "ಏನಾಯ್ತಮ್ಮಾ.. ಯಾಕಿಷ್ಟು ಅಳು?"

ರಾಗಿಣಿ ತಲೆ ಆಡಿಸುತ್ತಲೆ ಹೇಳಿದಳು "ಏನೂ ಇಲ್ಲ ಕಣೆಅಪ್ಪನ ಸ್ಥಿತಿ ನೋಡಿ ಬೇಜಾರಾಗಿದೆ ಅಷ್ಟೆ".

ರಕ್ಷಾ ಏನು ಹೇಳದೆ ಗೆಳತಿಯನ್ನು ಅಪ್ಪಿಕೊಂಡಳು. ಅಷ್ಟರಲ್ಲಿ ರಾಜಾರಾಮ್ ರಾಯರು ಕೆಳಗೆ ಬಂದರು. ಒಂದು ಪಟ್ಟೆ ಪಟ್ಟೆ ಲುಂಗಿಬನಿಯನಲ್ಲಿದ್ದ ಅವರನ್ನು ನೋಡಿ ಇಬ್ಬರು ಗೆಳತಿಯರು ಮುಖ ಮುಖ ನೋಡಿಕೊಂಡರು. ರಾಗಿಣಿಯ ಅಳು ಮತ್ತೆ ಶುರುವಾತು.

ರಾಯರು ರಕ್ಷಾಳನ್ನು ನೋಡುತ್ತಾ ನಗೆ ಬೀರಿ ಹತ್ತಿರ ಬಂದು ಕೇಳಿದರು "ರಾಗಿಣಿಯಾರಮ್ಮ ಬಂದಿರೋದು?" ಅಂತ. ಯಾರು ಉತ್ತರ ಕೊಡದಿದ್ದಾಗ ರಕ್ಷಾಳನ್ನು ಕೇಳಿದರು "ಹೆಲೋನಿಮ್ಮನ್ನ ಎಲ್ಲೋ ನೋಡಿದ ನೆನಪುಸಾರಿ ನನಗೆ ಆಲ್ಜೈಮರ್ಸ್ ಇದೆಹೆಚ್ಚು ನೆನಪಿರೊಲ್ಲ ನೋಡಿ."

ಅಷ್ಟರಲ್ಲಿ ಚೇತರಿಸಿಕೊಂಡ ರಾಗಿಣಿ ಅಪ್ಪನ ಕೈ ಎಳೆಯುತ್ತಾ ಹೇಳಿದಳು "ಅವಳು ರಕ್ಷಾ ಅಪ್ಪ. ಅದೆಲ್ಲಾ ಬಿಡಿ ನೀವು ರೆಡಿ ಆಗಿ ಬನ್ನಿಡಾಕ್ಟರ್ ಹತ್ರ ಹೋಗಬೇಕು"

ರಾಯರನ್ನು ಚಿಕ್ಕ ಮಗುವಿನಂತೆ ಕೈ ಹಿಡಿದು ರೂಮಿಗೆ ಕರೆದುಕೊಂಡು ಹೋದ ರಾಗಿಣಿಯನ್ನು ನೋಡುತ್ತಿದ್ದ ರಕ್ಷಾಳಿಗೆ ಹೇಗೆ ಪ್ರತಿಕ್ರಿಸಬೇಕು ಎಂದೆ ತಿಳಿಯಲಿಲ್ಲ. ಹಿಂದಿನ ವಾರ ಬಂದಾಗ ಅಂಕಲ್ ಇಷ್ಟು ಹದಗೆಟ್ಟಿರಲಿಲ್ಲ. ಇಷ್ಟು ಬೇಗ ಇಷ್ಟು ಬದಲಾವಣೆ ಸಾಧ್ಯಾನಎಂದು ಪ್ರಶ್ನಿಸಿತು ಅವಳ ಮನಸ್ಸು.

ರಾಗಿಣಿಯ ಸ್ಥಿತಿ ನೆನೆದು ಯೋಚಿಸುತ್ತಿದ್ದ ರಕ್ಷಾಳನ್ನು ರಾಗಿಣಿಯ ಧ್ವನಿ ಎಬ್ಬಿಸಿತು. "ಹೋಗೋಣ್ವಾ ರಕ್ಷಾ?"

ಆಸ್ಪತ್ರೆಯಲ್ಲಿ ಡಾಕ್ಟರನ್ನು ಕಂಡುಮಾಡಿಸಬೇಕಾದ ಪರೀಕ್ಷೆಗಳನ್ನು ಮುಗಿಸಿ. ಡಾಕ್ಟರ್ ಬದಲಾಯಿಸಿ ಕೊಟ್ಟ ಔಷಧಿಗಳನ್ನು ತಗೊಂಡು ಮನೆಗೆ ಬರುವ ಹೊತ್ತಿಗೆ ಮಧ್ಯಾಹ್ನ.

ಮನಗೆ ಕಾಲಿಟ್ಟವಳೆ ರಾಗಿಣಿ ಅಪ್ಪನನ್ನು ಬಟ್ಟೆ ಬದಲಾಸಿ ಎಂದು ರೂಮಿಗೆ ಕಳಿಸಿಸರಸರ ಅಡುಗೆ ರೆಡಿ ಮಾಡಿದಳು. ಅಪ್ಪ ಇನ್ನು ಕೆಳಗೆ ಬರದಿದ್ದನ್ನು ನೋಡಿ ಬೇಗ ಬೇಗ ಮೇಲೆ ಹೋಗಿ ಅಪ್ಪನನ್ನು ಕರೆ ತಂದಳು. ಚಿಕ್ಕ ಮಗುವಿಗೆ ರಮಿಸಿ ಊಟಕ್ಕೆ ಕೂರಿಸುವಂತೆ ಅಪನನ್ನು ಊಟಕ್ಕೆ ಕೂರಿಸಿ ಅವರು ಏನು ತಿಂದರು ಬಿಟ್ಟರು ಎಂದು ಗಮನಿಸಿಮಾತ್ರೆ ಕೊಟ್ಟು ಮೇಲೆ ರೂಮಿಗೆ ಅವರನ್ನು ಮಲಗಲು ಬಿಟ್ಟು ಬರುವ ತನಕ ರಕ್ಷಾ ಅವಳನ್ನು ಗಮನಿಸುತ್ತಾ ಇದ್ದಳು.

ಕೆಳಗೆ ಬಂದು ತನಗೆ ಮತ್ತೆ ರಕ್ಷಾಳಿಗೆ ಊಟ ಮಾಡಲು ತಟ್ಟೆ ಇಡುತ್ತಿದ್ದ ರಾಗಿಣಿ ಕೇಳಿದಳು "ಯಾಕೆ ಹಾಗೆ ನೋಡ್ತಾ ಇದ್ದೀಯಾ?"

ರಕ್ಷಾ ಥಟ್ಟನೆ ಅಂದಳು "ನೀನು ಒಳ್ಳೆ ಅಮ್ಮನಾಗ್ತೀಯಾ ಕಣೆ"

ಗೆಳತಿಯ ಮಾತಿಗೆ ಏನು ಉತ್ತರಿಸದೆ ಊಟಕ್ಕೆ ಕೂರಲು ಸನ್ನೆ ಮಾಡಿದಳು ರಾಗಿಣಿ. ಊಟ ಮುಗಿಯುವ ತನಕ ಏನು ಮಾತಾಡಲಿಲ್ಲ ಇಬ್ಬರು. ಊಟ ಮುಗಿದ ಮೇಲೆ ಅಡುಗೆ ಮನೆ ಕೆಲಸ ಮುಗಿಸಿ ಇಬ್ಬರು ಬಂದು ಸೋಫಾದ ಮೇಲೆ ಕೂತರು. ಹಿಂದೆ ಒರಗಿ ಕಣ್ಮುಚಿದ ರಾಗಿಣಿಯನ್ನು ರಕ್ಷಾಳ ಮೃದು ಧ್ವನಿ ಎಚ್ಚರಿಸಿತು "ಯಾಕೊ ಏನೊ ಮನಸ್ಸಿಗೆ ಹಚ್ಚಿಕೊಂಡು ಒದ್ದಾಡ್ತಾ ಇರೊ ಹಾಗಿದೆ. ಏನಾಯಿತು? ನನ್ನ ಹತ್ರ ಹೇಳು!!"

ರಾಗಿಣಿ ಒಂದು ನಿಟ್ಟುಸಿರು ಬಿಟ್ಟು ಕಣ್ಬಿಟ್ಟಳುಸುಮಾರು ಹೊತ್ತು ಏನು ಹೇಗೆ ಹೇಳುವುದು ಎಂದು ತೋಚದೆ ಹಾಗೆ ಕೂತಳು. ರಕ್ಷಾಳು ಅವಳ ಮೌನ ಮುರಿಯಲಿಲ್ಲ. ಏನೊ ಒಂದು ಎಳೆ ಸಿಕ್ಕಿದ ಹಾಗೆ ಮಾತು ಶುರು ಮಾಡಿದಳು ರಾಗಿಣಿ "ಎಷ್ಟು ವಿಚಿತ್ರ ಅಲ್ವಾ. ನಮಗೆ ಗೊತ್ತಿರುವ ಸಮಯದಿಂದ ಅಪ್ಪ ನಮ್ಮ ಹೀರೋ. ನನಗೊಂತು ಅಪ್ಪ ಇಲ್ಲದ ಒಂದು ದಿನಾನು ನೆನಪಿಲ್ಲ. ನನ್ನ ಎಲ್ಲಾ ನಗುಅಳುಸಾಹಸಹೊಡೆದಾಟ ಎಲ್ಲಾ ಅವರೊಂದಿಗೆ ಆಗಿದ್ದುಇಲ್ಲ ಅವರೊಂದಿಗೆ ಹಂಚಿಕೊಂಡಿದ್ದು. ನಾವು ದೊಡ್ಡವರಾಗ್ತಾ ಬಂದ ಹಾಗೆ ನಾವುನನ್ನದುನಮ್ಮ ಯೋಚನೆನಮ್ಮ ನಿರ್ಧಾರ ಅಂತ ತಂದೆ ತಾಯಿಗಳಿಂದ ಬೇರೆ ಆಗಿಬಿಡ್ತೀವಿ. ಆದರೆ ಅಪ್ಪ...... ಅಪ್ಪನಿಂದ ನಾನು ಬೇರೆಯಾಗಬೇಕು ಅಂತಾನೆ ನಂಗೆ ಅನಿಸಲಿಲ್ಲ."

ಅಲ್ಲಿಗೆ ಮಾತು ನಿಲ್ಲಿಸಿದ ರಾಗಿಣಿಅದನ್ನು ಮುಂದುವರೆಸುತ್ತಾಳೆ ಅಂತ ಕಾದಳು ರಕ್ಷಾ. ಸುಮಾರು ಹೊತ್ತು ಏನು ಮಾತಾಡದ ರಾಗಿಣಿಯನ್ನು ಮತ್ತೆ ಕೇಳಿದಳು ರಕ್ಷಾ "ಆದರೆ ಈಗ?"

ತನ್ನೆಲ್ಲಾ ಶಕ್ತಿಯನ್ನು ಹಾಕಿ ಉಸಿರು ಎಳೆದುಕೊಂಡು ಹೇಳಿದಳು ರಾಗಿಣಿ "ಈಗ?!! ಈಗ ಅಪ್ಪ ಸೂಪರ್ ಹೀರೋ ಅಲ್ಲಅಪ್ಪ ಬೆಸ್ಟ್ ಫ್ರೆಂಡ್ ಅಲ್ಲಅಪ್ಪ.. ಅಪ್ಪ ಕೂಡ ಅಲ್ಲ. ಅಪ್ಪ ಬಹಳ ಸಾಮಾನ್ಯ ಮನುಷ್ಯ. ಮತ್ತೆ ಅವರ ಪರಿಜ್ಞಾನ ದಿನ ದಿನಕ್ಕೆ ಕ್ಷಿಣಿಸ್ತಾ ಇದೆ. ಒಮ್ಮೆ ಅವರ ಕಣ್ಣುಗಳಲ್ಲಿ ಅದೇನೋ ಹೊಳಪುಈಗ ... ಈಗ ಅಲ್ಲಿ ಮೋಡ ಕವಿದಿದೆಸದಾ ಗಲಿಬಿಲಿ, ಏನೋ ಮರೆತ ಭಾವ....

ಕೆಲವೊಮ್ಮೆ ಯೋಚಿಸಿದ್ರೆ ನೀನೇ ಭಾಗ್ಯಶಾಲಿನಿಮ್ಮಪ್ಪ ಹೋದಾಗ ತಕ್ಷಣ ಪ್ರಾಣ ಬಿಟ್ರೂ. ಅವರು ಈಗಿದ್ದರೂ ಮತ್ತೆ ಈಗ ಇರಲಿಲ್ಲ. ಹೀಗೆ ಅಣು ಅಣುವಾಗಿ ಅವರ ಮನಸ್ಸು ಮಾಯವಾಗಿ ದೇಹ ಮಾತ್ರ ಉಳಿಯುವುದನ್ನು ನೀನು ನೋಡಿಲ್ಲ. ನೀನು ಲಕ್ಕಿ." ಎನ್ನುತ್ತಾ ಬಿಕ್ಕಿದಳು ರಾಗಿಣಿ.

ರಾಗಿಣಿಯ ಮಾತನ್ನು ಕೇಳಿ ತಟಸ್ಥಳಾಗಿದ್ದಳು ರಕ್ಷಾ. ತನ್ನ ತಂದೆ ಹೀಗ್ ಇರೊದಕ್ಕಿಂತ ಹೋಗಿದ್ದರೆ ಚೆನ್ನಾಗಿತ್ತು ಎನ್ನುವಂತಿತ್ತು ಅವಳ ಮಾತು. ಹೇಗೊ ಚೇತರಿಸಿಕೊಂಡು ಗೆಳತಿಗೆ ಸಮಾಧಾನ ಮಾಡಿದಳು ರಕ್ಷಾ.

ಸಂಜೆ ರಕ್ಷಾ ಮನೆಗೆ ಹೋದ ಮೇಲೂ ರಾಗಿಣಿಯ ಮನಸ್ಸು ಇನ್ನು ತಿಳಿಯಾಗಿರಲಿಲ್ಲ. ರಾತ್ರಿಯ ಊಟಅಪ್ಪನ ಕೆಲಸಮಾತ್ರೆ ಮುಗಿಸಿ ಅವರು ನಿದ್ರೆಗೆ ಜಾರಿದ ಮೇಲೆ ಅಡುಗೆ ಮನೆ ಕೆಲಸ ಮುಗಿಸಿಬಾಗಿಲಿಗೆ ಬೀಗ ಹಾಕಿ ತನ್ನ ರೂಮಿಗೆ ಬಂದವಳ ಮನಸ್ಸು ಇನ್ನು ಹೋಯ್ದಾಡುತ್ತಾ ಇತ್ತು. ದೇಹ ಕುಸಿದು ಬೀಳುವಷ್ಟು ಧಣಿದಿದ್ದರು ಮನಸ್ಸು ಇನ್ನು ಯೋಚಿಸುತಿತ್ತು.

ಹಾಸಿಗೆ ಮೇಲೆ ಕುಸಿದು ಕೂತವಳಿಗೆ ರಕ್ಷಾಳೊಂದಿಗೆ ಮಾತಾಡಿದ ಮಾತುಗಳು ನೆನಪಾದವು "ಅಪ್ಪ ಸೂಪರ್ ಹೀರೋ ...... ಚಿಕ್ಕವಳಿದ್ದಾಗ ದೊಡ್ಡವರು ಚಿಕ್ಕವರು ಅನ್ನೋದು ನೋಡದೆ ತಾನು ಸರಿ ಅಂದುಕೊಂಡಿದಕ್ಕೆ ಹೊಡೆದಾಡಲು ಸಿದ್ಧವಾಗುತ್ತಿದ್ದಳು. ಹೇಗಿದ್ದರೂ ಅವಳ ಸೂಪರ್ ಹಿರೋ ಇದ್ದಾರಲ್ಲ ಸಹಾಯಕ್ಕೆ ಅನ್ನೊ ನಂಬಿಕೆ."

"ಅಪ್ಪ ಬೆಸ್ಟ್ ಫ್ರೆಂಡ್...  ಇದೇ ಭಂಡ ಧೈರ್ಯದಲ್ಲಿ ಬೆಳೆದವಳಿಗೆ ಎಲ್ಲವನ್ನು ಹಂಚಿಕೊಳ್ಳಲು ಬೇಕಾಗುತ್ತಿದ್ದಿದ್ದು ಅಪ್ಪ. ಓದುಆಟಪಾಠ, ಗೆಳೆಯರುಹುಡುಗರು.... ಪ್ರಪಂಚದ ಎಲ್ಲಾ ವಿಷಯಗಳನ್ನೂ ಅಪ್ಪನೊಂದಿಗೆ ಹಂಚಿಕೊಳ್ಳುತ್ತಿದ್ದಳುಚರ್ಚಿಸುತ್ತಿದ್ದಳುವಾದಿಸುತ್ತಿದ್ದಳು. ಗೆದ್ದರೂಸೋತರು ಅದು ಅಪ್ಪನೊಂದಿಗೆ."

"ಅಪ್ಪ ... ಅಮ್ಮ ಹೋದಾಗತನಗೆ ಒಂಟಿತನ ಕಾಡಲಿಲ್ಲ. ಪ್ರೀತಿಯ ಜೀವಹೃದಯದ ಒಂದು ಭಾಗ ಹೋದ ದುಃಖ ಸಹಜ. ಆದರೆ ಹೆಣ್ಣು ಮಕ್ಕಳು ಅಮ್ಮನಿಲ್ಲದೆ ಅನುಭವಿಸುವ ಅನಾಥ ಭಾವ ಅವಳನ್ನು ಕಾಡಲಿಲ್ಲ. ಜೊತೆಯಲ್ಲಿ ಅಪ್ಪ ಇದ್ದಾರಲ್ಲ. ಮತ್ತೆ ಬದುಕು ಕಟ್ಟೋಣ. ನಮ್ಮದೆ ಚಿಕ್ಕ ಪ್ರಪಂಚ ಅನ್ನೋ ಅದೇ ಭಂಡ ಧೈರ್ಯ."

ಎಲ್ಲಾ ನೆನಪು ಒಮ್ಮೆ ಕಾಡಲು ಶುರು ಮಾಡಿದವು. ಕೊನೆಗೂ ಸುಸ್ತಾದ ದೇಹ ಮನಸ್ಸನ್ನು ಆವರಿಸಿತು. ಅರೆಬರೆ ನಿದ್ರೆಯಲ್ಲೆ ರಾತ್ರಿ ಕಳೆದ ರಾಗಿಣಿಗೆ ಬೆಳಗಿನ ಜಾವಕ್ಕೆ ತಲೆ ಮೇಲೆ ತಣ್ಣೀರು ಸುರಿದ ಹಾಗೆ ಹೊಳೆಯಿತು. ತಾನಂದ ಮಾತು ರಕ್ಷಾಳ ಮನಸ್ಸಿಗೆ ನೋವಾಗಿರಬಹುದು ಎಂದು "ನಿಮ್ಮಪ್ಪ ಹೋದಾಗ ತಕ್ಷಣ ಪ್ರಾಣ ಬಿಟ್ರೂ. ಅವರು ಈಗಿದ್ದರೂ ಮತ್ತೆ ಈಗ ಇರಲಿಲ್ಲ. ಹೀಗೆ ಅಣು ಅಣುವಾಗಿ ಅವರ ಮನಸ್ಸು ಮಾಯವಾಗಿ ದೇಹ ಮಾತ್ರ ಉಳಿಯುವುದನ್ನು ನೀನು ನೋಡಿಲ್ಲ. ನೀನು ಲಕ್ಕಿ." ಮನಸ್ಸು ಏನೇ ಸಮಜಾಯಿಸಿ ಕೊಟ್ಟರೂ ಅದಕ್ಕೂ ತಿಳಿದಿತ್ತುತಾನು ಹಾಗೆ ಹೇಳಬಾರದಿತ್ತು ಎಂದು.

ತಕ್ಷಣ ಎದ್ದುತನ್ನ ಫೋನ್ ಕೈಗೆತ್ತಿಕೊಂಡಳುವಾಟ್ಸ್ ಆಪ್‌ನಲ್ಲಿ ಸಾರಿ ಕೇಳಲು ಹೊರಟವಳು ಬೇಡವೆಂದು ನಿರ್ಧರಿಸಿ ಕಾಲ್ ಮಾಡಿದಳು.

ಇನ್ನು ನಿದ್ದೆಯಲ್ಲೆ ನೆಂದ ಧ್ವನಿಯಲ್ಲಿ ಕೇಳಿದಳು ರಕ್ಷಾ "ರಾಗಿ ಏನಾತೆಬರ್ಬೇಕಾ?"
ತನ್ನ ಬಗ್ಗೆ ಇಷ್ಟೂ ಕಾಳಜಿ ಇರುವ ಅವಳ ಮುದ್ದು ಮನಸ್ಸಿನ ಮಾತನ್ನು ಕೇಳಿ ರಾಗಿಣಿಯ ಗಂಟಲು ಕಟ್ಟಿತು. ತಕ್ಷಣ ಉತ್ತರಿಸಿದಳು "ಇಲ್ಲ ಕಣೆನಿಂಗೆ ಸಾರಿ ಹೇಳೋಣ ಅಂತ ಫೋನ್ ಮಾಡಿದೆ"
"ಸಾರಿನಾ?...... ಓ ಅದಕ್ಕಾ.. ಅಯ್ಯೊ ಅದಕ್ಕೆಲ್ಲಾ ಸಾರಿ ಯಾಕೆ. ನಂಗೊತ್ತು ನೀನು ತುಂಬಾ ಸ್ಟ್ರೆಸ್ ಆಗಿದ್ದೀಯಾ. ಅದನ್ನು ಮರೆತುಬಿಡು"
"ಇಲ್ವೆನಾನು ಹಾಗೆ ಯೋಚಿಸದೆ ಹೇಳಬಾರದಿತ್ತು. ನನ್ನ ಕ್ಷಮಿಸು"
"ಅಯ್ಯೊ ಮಹತಾಯಿ ಅದು ಬಿಡು... ಅಂದ ಹಾಗೆ ಇವತ್ತು ಆಫೀಸಿಗೆ ರಜ ಹಾಕಿದ್ದೀಯಾ ಇಲ್ಲ ಹೋಗ್ತೀಯಾ"
"ಇಲ್ಲಪ್ಪ ಇವತ್ತು ರಜ ಹಾಕಿದ್ರೆ ಬಾಸ್ ಮನೆಲೆ ಇರು ಅಂತಾರೆ ಅಷ್ಟೆ. ಹೋಗಬೇಕು"
"ಸರಿ ಹಾಗಿದ್ರೆ ಸಂಜೆ ನಮ್ಮ ಐಸ್ ಕ್ರೀಮ್ ಪಾರ್ಲರ್‌ನಲ್ಲಿ ನನಗೆ ಐಸ್ ಕ್ರೀಮ್ ಕೊಡಿಸುಆಗ ಕ್ಷಮಿಸ್ತೀನಿ"
"ಓಕೆ ಡನ್... ಸಂಜೆ ಸಿಗೋಣ. ಬೈ"
"ಬೈ"

ರಕ್ಷಾಳೊಂದಿಗೆ ಮಾತಾಡಿದ ಮೇಲೆ ರಾಗಿಣಿಯ ಮನಸ್ಸು ಸ್ವಲ್ಪ ಗೆಲುವಾಯಿತು. ಗಂಟೆ ನೋಡಿದವಳಿಗೆ ಓಡುತ್ತಿದ ಗಡಿಯಾರ ಸಮಯ ಜಾರುತ್ತಿದೆ ಎಂದು ತಿಳಿಸಿತು. ಬೇಗನೆ ಎದ್ದು ತನ್ನ ಕೆಲಸಅಡುಗೆ ಎಲ್ಲಾ ಮುಗಿಸಿಅಪ್ಪನ ಬೆಳಗಿನ ಕೆಲಸತಿಂಡಿ ಮುಗಿಸಿಬಾಕ್ಸ್ ತುಂಬಿಕೊಂಡು ಬ್ಯಾಗ್ ಹಾಕಿಕೊಳ್ಳುವಷ್ಟರಲ್ಲಿಅಪ್ಪನನ್ನು ನೋಡಿಕೊಳ್ಳುವ ಕೇರ್ ಟೇಕರ್ ಬಂದರು. ಅವರ ಕೈಗೆ ಅಪ್ಪನನ್ನು ಒಪ್ಪಿಸಿ ತನ್ನ ಚಾಕರಿ ಮಾಡುವ ಕಡೆ ಹೊರಟಳು.

ಆ ಐಸ್ ಕ್ರೀಮ್ ಪಾರ್ಲರ್ ಬಾಗಿಲು ತೆರೆದಾಗಿನಿಂದ ಅಲ್ಲಿನ ಖಾಯಂ ಗಿರಾಕಿಗಳಾಗಿದ್ದರು ಈ ಇಬ್ಬರು ಗೆಳತಿಯರು. ಪ್ರತಿ ಸಾರಿನೂ ಅದೇ ಗಡ್‌ಬಡ್ ಐಸ್ ಕ್ರೀಮ್. ಈಗಲೂ ಅಷ್ಟೆ ಅದೇ ಐಸ್‌ಕ್ರೀಮನ್ನು ಮೊದಲ ಸಾರಿ ಆಸೆ ಪಟ್ಟು ತಿಂದ ಹಾಗೆ ಸವಿಯುತ್ತಿದ್ದರು.

ಐಸ್ ಕ್ರೀಮ್ ಮುಗಿದ ಮೇಲೆ ತೃಪ್ತಿಯ ನಗೆ ಬೀರುತ್ತು ರಕ್ಷಾ ಅಂದಳು "ತಗೊ ಭಕ್ತೆ ನನ್ನ ಕ್ಷಮೆಯನ್ನು ನಿನಗೆ ವರವಾಗಿ ನೀಡಿದ್ದೀನಿ"

ನಗುಮುಖದೊಂದಿಗೆ ಕೈ ಜೋಡಿಸಿ ತಲೆ ಬಾಗಿ ರಾಗಿಣಿ ಅಂದಳು "ಧನ್ಯನಾದೆ ತಾಯಿ

ಗೆಳತಿಯರಿಬ್ಬರೂ ಅಪರೂಪಕ್ಕೆ ಜೋರಾಗಿ ಯಾರ ಪರಿವೆ ಇಲ್ಲದಂತೆ ನಕ್ಕರು.

ದುಡ್ಡು ಕೊಟ್ಟು ಇಬ್ಬರು ಅಂಗಡಿಯ ಹೊರಗೆ ಬಂದಾಗ ರಕ್ಷಾ ಹೇಳಿದಳು "ನಿಂಗೆ ಅರ್ಜೆಂಟ್ ಇಲ್ಲ ಅಂತಾದ್ರೆ ದೇವಸ್ಥಾನಕ್ಕೆ ಹೊಗೋಣ್ವಾ?"
ಗೆಳತಿಗೆ ಇಲ್ಲವೆನ್ನಲು ಮನಸ್ಸಿಲ್ಲದೆ ರಾಗಿಣಿ ಒಪ್ಪಿದಳು. ಗಡಿಯಾರ ನೋಡಿ ಎಷ್ಟು ಸಮಯವಿದೆ ಎಂದು ಖಾತ್ರಿ ಪಡಿಸಿಕೊಂಡು ಇಬ್ಬರೂ ಹತ್ತಿರದ ದೇವಸ್ಥಾನಕ್ಕೆ ಹೊರಟರು.

ಕುಂಕುಮತೀರ್ಥಪ್ರಸಾದವಾದ ಮೇಲೆ ದೇವಸ್ಥಾನ ಅರಳಿ ಮರದ ಬುಡದ ಕೆಳಗೆ ಕೂತು ಇಬ್ಬರೂ ಒಮ್ಮೆ ಶಾಂತವಾದರೂ.
ಸ್ವಲ್ಪ ಹೊತ್ತಿನ ನಂತರ ರಕ್ಷಾ ಅಂದಳು "ಒಂದು ಮಾತು ಹೇಳಲಾ?"

"ಹೇಳೆಅದಕ್ಕೇನು ಪರ್ಮಿಷನ್ ಬೇಕಾ"

"ನೆನ್ನೆ ನೀನಂದ ಮಾತಿಗೆ ನಾನು ಕ್ಷಮಿಸಿದ್ದೀನಿ. ಆದರೂ ಅದಕ್ಕೆ ಸಂಭಂದಿತವಾಗಿ ಒಂದು ಮಾತು ಹೇಳಬೇಕು"
ಮನಸ್ಸು ಗಟ್ಟಿ ಮಾಡಿಕೊಂಡು ರಾಗಿಣಿ ಹೇಳು ಎಂದು ತಲೆಯಾಡಿಸಿದಳು

"ನೀನು ಹೇಳಿದ್ದು ಸರಿ ಅಪ್ಪಂದು ಬಹಳ ಸುಖಕರವಾದ ಸಾವು. ಸಾವು ಬರುವುದಾದರೆ ಹಾಗೆ ಬರಬೇಕುರಾತ್ರಿ ಮಲಗಿದವರು ಬೆಳಗ್ಗೆ ಏಳಲಿಲ್ಲ. ಕೆಲವೊಮ್ಮೆ ನಂಗೆ ಅನ್ಸುತ್ತೆಕನಸಿನ ಲೋಕಕ್ಕೆ ತೇಲಿ ಹೋದ್ರೂ ಅಂತ. ಆದರೆ ಅವರು ಹೇಗೆ ಹೋಗಿರಲಿಅವರು ಇಲ್ಲ ಅನ್ನುವ ದುಃಖ ಯಾವತ್ತು ಕಮ್ಮಿಯಾಗೊಲ್ಲ. ಅವರನ್ನು ಮಿಸ್ ಮಾಡದ ದಿನವಿಲ್ಲ. ಯಾವುದೆ ವಿಷಯಸುಖದುಃಖಹಬ್ಬಹರಿದಿನಏನೆ ಇರಲಿ ನಮ್ಮೊಂದಿಗೆ ಹಂಚಿಕೊಳ್ಳಲು ಅವರಿಲ್ಲವಲ್ಲ ಅನ್ನುವ ಭಾವ ಮಾಸಲ್ಲ. ಬದುಕಲ್ಲಿ ಅವರ ಸ್ಥಾನ ಯಾವತ್ತು ಖಾಲಿ ಖಾಲಿ ಅನ್ಸುತ್ತೆಆ ಖಾಲಿತನ ಎಂದು ಕಮ್ಮಿ ಅನ್ಸೊಲ್ಲ"

ರಕ್ಷಾಳ ಮಾತು ಕೇಳಿ ರಾಗಿಣಿಯ ಕಣ್ಣು ತುಂಬಿ ಬಂದವು. ನಿರ್ಲಕ್ಷ್ಯದಿಂದಾಡಿದ ಒಂದು ಮಾತು ಎಷ್ಟು ನೋವುಂಟು ಮಾಡಿದೆ ಎಂದು ನೊಂದಳು. ರಕ್ಷಾಳನ್ನು ಸಮಾಧಾನಿಸಲು ಹೊರಟವಳನ್ನು ರಕ್ಷಾಳ ಮಾತು ತಡೆಯಿತು "ಇಲ್ಲನಿನಗೆ ದುಃಖ ಕೊಡಬೇಕು ಅಂತ ಹೇಳ್ತಾ ಇಲ್ಲ. ನಂಗೊತ್ತು ನಿಮ್ಮಪ್ಪನ ಸ್ಥಿತಿ ಎಂದು ಸುಧಾರಿಸೋಲ್ಲಾಅವರು ಮರೆತು ಹೋಗಿರೋದನ್ನು ಮತ್ತೆ ಎಂದು ನೆನಪಿಸಿಕೊಳ್ಳೋದಿಲ್ಲಈಗ ಅವರ ನೆನಪು ಮರಳಿನ ಮೇಲಿನ ಅಕ್ಷರಗಳ ಹಾಗೆಯಾವಾಗ ಯಾವ ಅಲೆ ಯಾವ ಅಕ್ಷರ ಅಳಿಸುತ್ತೊ ಗೊತ್ತಿಲ್ಲ. ಇವತ್ತುಈ ಕ್ಷಣಈ ರಾತ್ರಿನಾಳೆ ಅವರಿಗೆ ಏನು ನೆನಪಿರುತ್ತೊ ಗೊತ್ತಿಲ್ಲ. ಆದರೆ ಒಂದು ಮಾತು ಯೋಚಿಸು ರಾಗಿ ನೆನಪು ಹೋಗ್ತಾ ಇರೋದು ಅವರದ್ದು ನಿಂದಲ್ಲ. ಅವರಿಗೆ ನಾಳೆ ಒಂದಿನ ನೀನು ಅವರ ಮಗಳು ಅಂತ ಮರೆತು ಹೋಗಬಹುದು ಆದರೆ ನಿನಗೆ ನೆನಪಿರುತ್ತೆ ಅವರೆ ನಿನ್ನ ತಂದೆ ಅಂತ. ಅವರಿಗೆ ನಿನ್ನ ಬಾಲ್ಯನಿನ್ನ ಪ್ರೀತಿನಿನ್ನ ಅಷ್ಟು ನೆನಪು ಅಳಿಸಬಹುದು ಆದರೆ ನೀನು ಅವರ ಪರವಾಗಿ ನೆನಪಿಟ್ಕೊ. ಅವರಿಗೆ ನೀನ್ಯಾರು ಎಂದು ನೆನಪಿರಲಿ ಬಿಡಲಿನೀನಿನ್ನು ಅವರನ್ನು ನೋಡಬಹುದುಮುಟ್ಟಬಹುದುಅವರಿಗೆ ಯಾಕೆ ಅಂತ ಅರಿವಾಗದಿದ್ದರೂ ನಿನ್ನ ದುಃಖಸುಖ ಹಂಚಿಕೊಳ್ಳಲು ಅವರನ್ನು ಅಪ್ಪಬಹುದುಪ್ರೀತಿ ತೋರಿಸಬಹುದು. ಅವರನ್ನು ನೋಡಿ ಇಷ್ಟು ಹಿಂಸೆಯಾಗ್ತಾ ಇದೆ ನಿಂಗೆ. ನೆನಪು ಬೆರಳಗಳ ಮಧ್ಯದಲ್ಲಿ ಜಾರಿ ಹೋಗ್ತಾ ಇರೋದನ್ನು ಅನುಭವಿಸುತ್ತಿರುವ ಅವರಿಗೆ ಇನ್ನೆಷ್ಟು ಹಿಂಸೆಯಾಗ್ತಾ ಇದೆ ಯೋಚಿಸು. ಅವರು ಅಪ್ಪನಾಗಿ ನಿನ್ನ ತುಂಬಾ ಪ್ರೀತಿಸಿದ್ದಾರೆಆದರೆ ಈಗ ಅವರಿಗೆ ನೀನು ಸೂಪರ್ ಹೀರೊ ಆಗಬೇಕುನೀನು ಬೆಸ್ಟ್ ಫ್ರೆಂಡ್ ಆಗಬೇಕುನೀನು ಅಪ್ಪ ಆಗಬೇಕು. ಅವರು ಹೋದ ಮೇಲೆ ಉಳಿಯುವುದು ಆ ಸ್ಪರ್ಶದಆ ಧ್ವನಿಯಆ ಪ್ರೀತಿಯ ಒಂದು ಚಾಯೆ ಮಾತ್ರ. ಅವರೊಂದಿಗಿರುವ ಈ ಕೆಲವು ಅಮೂಲ್ಯ ಕ್ಷಣಗಳನ್ನ ನಾಳೆ ಏನಾಗುತ್ತೆ ಅಂತ ಯೋಚಿಸುತ್ತಾ ಕಳ್ಕೊಳ್ಬೇಡ. ನಗುಪ್ರೀತಿಸುಅವರ ಪಾಲಿಂದು ನೀನೇ ಜೀವಿಸಿ ಅವರಿಗೆ ತೋರಿಸು."

ತನ್ನ ದುಃಖವೇ ಅತಿ ದೊಡ್ಡದು ಎಂದು  ದುಃಖಿಸುತ್ತಿದ್ದ ರಾಗಿಣಿಗೆ ಯಾರೋ ತಟ್ಟಿ ಎಬ್ಬಿಸಿತಣ್ಣೀರು ಸೋಕಿದಂತಾಯಿತು. ರಕ್ಷಾಳನ್ನು ಬಿಗಿದಪ್ಪಿ ಅತ್ತು ಮನಸ್ಸು ಹಗುರ ಮಾಡಿಕೊಂಡಳು.

ಗೆಳತಿಯರಿಬ್ಬರೂ ಮತ್ತೇನೂ ಮಾತಾಡದೆ ಒಬ್ಬರನೊಬ್ಬರು ಬೀಳ್ಕೊಟ್ಟರು. ಮನೆಯತ್ತ ಹೊರಟ ರಾಗಿಣಿಯ ಜೀವನ ಏನು ಬದಲಾಗಿರಲಿಲ್ಲಅದೇ ೨೬ ವರ್ಷದ ರಾಗಿಣಿಅದೇ ಕತ್ತೆ ಚಾಕರಿ ಮಾಡುವ ಕೆಲಸಅದೇ ಖರ್ಚುಗಳುಮತ್ತು ಅದೇ ಮಾಸುವ ನೆನಪಿನ ಅಪ್ಪ. ಆದರೆ ಈಗ ಕಣ್ಣಲ್ಲಿ ಹೊಸ ಹೊಳಪಿತ್ತುಹೆಜ್ಜೆಯಲ್ಲಿ ಹೊಸ ಹುಮ್ಮಸ್ಸು. ಬಾಗಿಲು ತೆರೆದು ಪುಸ್ತಕ ಓದುತ್ತಾ ಕೂತ ಅಪ್ಪನನ್ನು ನೋಡಿದ ಅವಳ ಮುಖದಲ್ಲಿ ಹೊಸ ಗುಟ್ಟು ತಿಳಿದವಳಂತೆ ಒಂದು ನಗು.

ಕಾಮೆಂಟ್‌ಗಳು

  1. ಗೆಳೆತನ ಬರಿ ಸುಖಃ ಹಂಚಿಕೊಳ್ಳುವುದಲ್ಲ ಬದಲಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು. ಬೇಸರ ಮಾತುಗಳನ್ನು ಅರಿವಿಲ್ಲದ ಹೇಳಿದರೂ ಅದನ್ನು ತಿದ್ದಿ ತಿಳಿ ಹೇಳಿ ಅವರ ಸಂಕಟಗಳಿಗೆ ಪೂರ್ಣ ವಿರಾಮ ಕೊಟ್ಟು ಮತ್ತೆ ನಗುವಿನ ನಂದನವನಕ್ಕೆ ಕರೆತರುವುದು.

    ಒಂದು ಸಮಸ್ಯೆಯನ್ನು ಬಗೆಹರಿಸಲು ಎಷ್ಟುವಿಧವಿದೆ , ಆದರೆ ಸರಳ ವಿಧಾನದಲ್ಲಿ ಹೇಳುವುದು ಇದೆಯಲ್ಲ ಅದು ಕಲೆ.

    ಈ ಕೆಳಗಿನ ಸಾಲುಗಳು ನನಗೆ ಬಲು ಇಷ್ಟವಾದವು "ನೆನಪು ಹೋಗ್ತಾ ಇರೋದು ಅವರದ್ದು ನಿಂದಲ್ಲ. ಅವರಿಗೆ ನಾಳೆ ಒಂದಿನ ನೀನು ಅವರ ಮಗಳು ಅಂತ ಮರೆತು ಹೋಗಬಹುದು ಆದರೆ ನಿನಗೆ ನೆನಪಿರುತ್ತೆ ಅವರೆ ನಿನ್ನ ತಂದೆ ಅಂತ. ಅವರಿಗೆ ನಿನ್ನ ಬಾಲ್ಯ, ನಿನ್ನ ಪ್ರೀತಿ, ನಿನ್ನ ಅಷ್ಟು ನೆನಪು ಅಳಿಸಬಹುದು ಆದರೆ ನೀನು ಅವರ ಪರವಾಗಿ ನೆನಪಿಟ್ಕೊ"

    ಇಡಿ ಕಥೆಗೆ ತಕ್ಕ ಸಾಲುಗಳು ಇವು.

    ಬದುಕಲ್ಲಿ ಬರುವ ಸಮಸ್ಯೆಯನ್ನು ಕೊಂಚ ದೂರ ನಿಂತು ನೋಡಿದಾಗ ಅಥವಾ ಅದಕ್ಕೆ ವಿಭಿನ್ನ ದೃಷ್ಟಿ ಕೋನ ಇಟ್ಟು ನೋಡಿದಾಗ ಕಷ್ಟ, ಕಷ್ಟಗಳೇ ಅಲ್ಲಾ

    ಸೂಪರ್ ನಿವಿ ಬಲುದಿನಗಳ ನಂತರ ಮತ್ತೊಮ್ಮೆ ನಿವಿ ಸ್ಪೆಷಲ್

    ಬಲು ಇಷ್ಟವಾಯಿತು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು