ಪ್ರೀತಿಯ ಮುಖಗಳು
Google images |
“ತುಂಬಿ ತುಳುಕುತ್ತಿದ್ದ
ಮನೆ, ಮೈ ಕೈ ತಾಗಿಸದೆ ಓಡಾಡಲು ಸಾಧ್ಯವಿಲ್ಲದಷ್ಟು ಜನ ಇದ್ದರಂತೆ. ಅಜ್ಜ ಅದಕ್ಕೆ ಅಂತಾನೆ ಇಷ್ಟು
ದೊಡ್ಡ ಮನೆ ಕಟ್ಟಿಸಿದ್ದನಂತೆ. ಇವತ್ತು ಅಜ್ಜನ ತಿಥಿ, ವರ್ಷಕ್ಕೆ ಒಮ್ಮೆ ಇದೊಂದು ದಿನ ಮನೆಯವರೆಲ್ಲರು
ಅಂದರೆ ಮಕ್ಕಳು, ಮೊಮ್ಮಕ್ಕಳು,
ಅತ್ತೆ, ಚಿಕ್ಕಿ, ಮಾವ, ದೊಡ್ಡಪ್ಪ ಹೀಗೆ ಎಲ್ಲರೂ ಒಂದು ಸೂರಿನಡಿ ಸೇರೋದು. ಅಜ್ಜ ಸಾಯೊ ಮುಂಚೆ ಹೇಳಿದ್ದನಂತೆ
ನನ್ನ ತಿಥಿನ ಹಬ್ಬದ ಹಾಗೆ ಆಚರಿಸಬೇಕು ಅಂತ. ಏನೋ ಅಜ್ಜಿ ಹೇಳ್ತಿದ್ದ ಕಥೆ ಕೇಳಿ ಅಜ್ಜನ ಪರಿಚಯ ಮಾಡಿಕೊಂಡವರು
ನಾವು...........”
ಅಕ್ಕ ಹೇಳುತ್ತಿದ್ದ
ಕಥೆ ಕೇಳುತ್ತ ತರಕಾರಿ ಹೆಚ್ಚುತ್ತಿದ್ದೆವು, ಅಷ್ಟರಲ್ಲಿ, ಈ ಮಾತಿನ ಭರಾಟೆಯನ್ನು ಮೀರಿ ಕೇಳಿಸಿತು
ಮೊಬೈಲ್ ಗಣಗಣ, ಆ ಕಡೆಯಿಂದ ಲಾವಣ್ಯ ಕೂಗಿದಳು “ಲಲಿತಕ್ಕ, ಬಂತು ನೋಡೆ ಯಜಮಾನರ ಕರೆ, ಬೇಗೆ ತಗೊಳ್ಳೆ
ಇಲ್ಲಾಂದ್ರೆ ಫೋನಿಂದ ಇಲ್ಲಿಗೆ ಬಂದು ಬಿಡ್ತಾರೆ ರಾಯರು” ಅಂತ ಹೇಳಿ ನಕ್ಕಳು. ಅವಳ ಜೊತೆಗೆ ಉಳಿದವರು
ಸೆರೆಗಿನೊಳಗೆ ಮುಗುಳ್ನಕ್ಕರು.
ಲಲಿತ ಅಲ್ಲಿಂದ ಕೈ
ಒರೆಸುತ್ತೆ ಬಂದಳು “ಸಾಕು ಸುಮ್ನಿರೆ, ಏನೊ ನಿಮ್ಮನೆಯವರು ಫೋನೇ ಮಾಡೊದಿಲ್ಲ ಅನ್ನೊ ಹಾಗೆ ಮಾಡ್ತಾಳೆ”
ಅಂತ ಹೇಳುತ್ತಾ ಫೋನ್ ಎತ್ತಿದಳು.
ಹಲೊ.....
ಹೂ ರೀ... ಅಲ್ಲಿ
ಕಟ್ಟೆ ಮೇಲೆ ಇದೆ ನೋಡಿ ನಿಮ್ಮ ಮಾತ್ರೆ.......
ಆ ಶರ್ಟನ್ನ ಐರನ್‍ಗೆ
ಕಳಿಸಿದ್ದೀನಿ....
ಮಾತಾಡುತ್ತಾ ನೆಡೆದು
ಹೋದ ಲಲಿತಾಳನ್ನೆ ಹಿಂಬಾಲಿಸಿತು ಸರಸಾಳ ಕಣ್ಣುಗಳು. ಒಮ್ಮೆ ನಿಟ್ಟುಸಿರು ಬಿಟ್ಟು ಹೆಚ್ಚುತ್ತಿದ್ದ
ಅವರೆಕಾಯಿಯ ಕಡೆ ಗಮನ ಹರಿಸಿದಳು. ಹೆಚ್ಚಿದ ಅವರೆಕಾಯಿ ತಗೊಂಡು ಹೋಗಲು ಬಂದ ಲಾವಣ್ಯ ನುಲಿದಳು “ಅವಳನ್ನು
ನೋಡಿದ್ರೆ ಸ್ವಲ್ಪ ಹೊಟ್ಟೆಕಿಚ್ಚಾಗುತ್ತೆ ಕಣೆ ಅಕ್ಕ, ಭಾವ ಎಷ್ಟು ಪ್ರೀತಿಸುತ್ತಾರೆ ಅವಳನ್ನು ಅಲ್ವ.
ನಮ್ಮೆಯವರು ಇದ್ದಾರೆ ಹೆಂಡ್ತಿ ಊರಿಗೆ ಹೋದ್ರೆ ಸಾಕು ಅಂತ ಕಾಯ್ತಾ ಇರ್ತಾರೆ. ಪ್ರಕಾಶ್ ಭಾವನೂ ಬಹಳ
ವಿಚಾರಿಸೊಲ್ಲ ಅಲ್ವೆ ಅಕ್ಕ. ಹೋಗಲಿ ಬಿಡು ಅವರವರ ಪಾಲಿಗೆ ಬಂದಿದ್ದು ಅವರಿಗೆ”
ಹೆಚ್ಚುತ್ತಿದ್ದ
ಅವರೆಕಾಯನ್ನು ನಿಲ್ಲಿಸಿ ಸರಸ ಅಂದಳು “ಒಬ್ಬೊಬ್ಬರೂ ಒಂದೊಂದು ತರಹ ಪ್ರೀತಿ ವ್ಯಕ್ತ ಪಡಿಸುತ್ತಾರೆ
ಕಣೆ, ಯಾಕೆ ನಿಮ್ಮನೆಯವರು ಹೊರ ಊರಿಗೆ ಹೋದಾಗಲೆಲ್ಲ ನಿನಗೆ ಅಂತ ಏನಾದ್ರೂ ಹುಡುಕಿ ತರೊಲ್ವ. ಹಾಗೆ”
ಲಾವಣ್ಯ ಪ್ಲೇಟು
ಹಿಡಿದು ಎದ್ದು ನಿಂತು “ಏನೋಪ್ಪಾ, ಆದರೆ ಲಲಿತಕ್ಕನ ಮನೆಯವರು ಮಿಸ್ ಮಾಡೋ ಹಾಗೆ ಮಿಸ್ ಮಾಡೊಲ್ವಲ್ಲ“
ಅಂತ ಅಂದು ತನ್ನ ಕೆಲಸಕ್ಕೆ ವಾಪಸ್ ನೆಡೆದಳು...
ದೂರದಲ್ಲಿ ಲಲಿತಾಳ
ಧ್ವನಿ ಕೇಳುತ್ತಿತ್ತು
“ಬೆಕ್ಕಿನ ಮರಿ ಹಾಲು
ಕುಡಿದೇ ಇದ್ರೆ, ಇಲ್ಲಿ ಇರೊ ನಾನು ಏನ್ರಿ ಮಾಡ್ಬೇಕು...
‘,,,,,
“ನಾಳೆ ತಿಥಿ ಕಾರ್ಯ
ಮುಗಿಸದೆ ನಾನು ಬರೋಕೆ ಆಗೊಲ್ಲ ಕಣ್ರಿ, ಪ್ಲೀಸ್ .......”
ಅಷ್ಟು ಹೇಳಿ ಅವಳ
ಧ್ವನಿ ಇನ್ನು ತಗ್ಗಿತು. ಸರಸಳ ತುಟಿಯಲ್ಲಿ ಸಣ್ಣ ನಗು, ಮನದಲ್ಲಿ ನೂರು ಮಾತುಗಳು “ರಮಿಸುತ್ತಿರಬೇಕು
ಅದಕ್ಕೆ ನಿಧಾನ ಮಾತಾಡ್ತಾ ಇದ್ದಾಳೆ. ಲಲಿತಾಳ ದಾಂಪತ್ಯ ಕಂಡು ಖುಷಿಯಾದರೂ, ತನ್ನ ದಾಂಪತ್ಯದಲ್ಲಿ
ಇಲ್ಲದೆ ಇರುವುದನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆಯಾ ಅನ್ನೊ ಪ್ರಶ್ನೆ ಬೇರೆ. ಇಲ್ಲ ನನ್ನ ಜೀವನ
ನನಗೆ ಖುಷಿಯಾಗಿದೆ, ಅವಳ ಜೀವನ ಅವಳಿಗೆ ಸರಿಯಾಗಿದೆ.” ಅಂತ ಸಮಾಧಾನಿಸಿಕೊಂಡು ತನ್ನ ಕೆಲಸದ ಕಡೆ ಗಮನ
ಹರಿಸಿದಳು.
ರಾತ್ರಿಯ ಊಟ ಮುಗಿಸಿ
ಎಲ್ಲಾರಿಗೂ ಮಲಗೊ ವ್ಯವಸ್ತೆ ಮಾಡುವಾಗಲೂ ಸರಸಳ ಮನಸಿನಲ್ಲಿ ಏನೊ ಗೊಂದಲ. “ನನ್ನವರು ನಿಜವಾಗಿ ನಾನು
ಇಲ್ಲದನ್ನು ಗಮನಿಸುತ್ತಾರೆ” ಅನ್ನೊ ಪ್ರಶ್ನೆ. ಕೊನೆಗೂ ಮನಸ್ಸು ತಡಿಯದೆ ಮನೆಯವರಿಗೆ ಫೋನ್ ಹಚ್ಚಿದಳು
...
“ಹಲೊ ”
“ರೀ ನಾನು ಸರಸು”
“ಗೊತ್ತು ಕಣೆ ನನಗೆ,
ಹೇಳು...”
“ಊಟ ಆಯ್ತಾ?”
“ಹೂಂ, ಊಟ ಮಾಡಿ
ಈಗ ಮಲಗೋಕೆ ಹೊರಟೆ”
“ಮಾತ್ರೆ ತಗೊಂಡ್ರಾ?”
“ಹೂಂ ತಗೊಂಡೆ.....
ನಿಂದು ಊಟ ಆಯಿತಾ? ನಾಳೆ ತಿಥಿಗೆ ಎಲ್ಲಾ ತಯಾರಿ ಆಯ್ತಾ?”
“ಹಾ ಎಲ್ಲಾ ಅಯಿತು”
ಸ್ವಲ್ಪ ಹೊತ್ತಿನ
ಮೌನದ ನಂತರ ಸರಸ ನಿಟ್ಟುಸಿರು ಬಿಡುತ್ತಾ ಹೇಳಿದಳು “ಸರಿ ಫೋನ್ ಇಡ್ತೀನಿ ಹಾಗಾದ್ರೆ, ಜೋಪಾನ”
“ಹಾ....ಒಂದು ನಿಮಿಷ ಸರಸು....
ಅದು .. ಅದು .... ಮತ್ತೆ ನೀನು ಯಾರೆಲ್ಲ ಬಂದಿದ್ದಾರೆ ಅಂತ ಹೇಳಲೆ ಇಲ್ಲ.. ನಿಮ್ಮ ಹೊನಳ್ಳಿ ಮಾವ
ಬಂದಿದ್ದಾರಾ?”
..........
ಹೀಗೆ ಅರ್ಧ ಗಂಟೆ
ಮಾತಾಡಿ ಫೋನ್ ಇಟ್ಟ ಸರಸಾಳ ಮುಖದಲ್ಲಿ ಒಂದು ಸಂತಸದ ಮುಗುಳ್ನಗೆ.... ಮನದಲ್ಲೆ ಅಂದು ಕೊಂಡಳು “ಒಬ್ಬೊಬ್ಬರೂ
ಒಂದೊಂದು ತರಹ ಪ್ರೀತಿ ವ್ಯಕ್ತ ಪಡಿಸುತ್ತಾರೆ”.............
ಸರಿಯಾಗಿ ಹೇಳಿದಿರಿ:
ಪ್ರತ್ಯುತ್ತರಅಳಿಸಿ“ಒಬ್ಬೊಬ್ಬರೂ ಒಂದೊಂದು ತರಹ ಪ್ರೀತಿ ವ್ಯಕ್ತ ಪಡಿಸುತ್ತಾರೆ”
ಕೆಲವರದು ವ್ಯಕ್ತ ಮತ್ತು ಹಲವರದು ಅವ್ಯಕ್ತ.
ಮದುವೆಯಾಗಿ ಐವತ್ತು ವರ್ಷಗಳೇ ಸಂದು ಹೋದರೂ ಒಬ್ಬರನ್ನು ಬಿಟ್ಟು ಒಬ್ಬರು ಇರಲಾರದ ದಂಪತಿಗಳನ್ನು ನೋಡಿದ್ದೇನೆ.
ಹಾಗೆಯೇ,
ಇನ್ನೂ ಮೂರ್ನಾಲ್ಕು ವರ್ಷಗಳೇ ಆದರೂ ಹೇಳಿಕೊಳ್ಳದ ಅನ್ಯೋನ್ಯತೆಯನ್ನು ಕಂಡುಕೊಳ್ಳದ ಜೋಡಿಗಳನ್ನೂ ಕಣ್ಣಾರೆ ಕಂಡಿದ್ದೇನೆ.
short and powerful writeup. :)
ದಾಂಪತ್ಯಾದ ಸರಸ-ವಿರಸಗಳು, ಪ್ರೀತಿ-ಸ್ನೇಹಗಳು ತುಂಬಾ ಚೆನ್ನಾಗಿ ವ್ಯಕ್ತ ಪಡಿಸಿದ್ಡಿರಿ.
ಪ್ರತ್ಯುತ್ತರಅಳಿಸಿಥ್ಯಾಂಕ್ಸ್ :)
ಅಳಿಸಿಸಮಯದ ಗೊಂಬೆ ಚಿತ್ರದ ಅಂತಿಮ ದೃಶ್ಯ.. ಹೇಳುವುದನ್ನು ಹೇಳಲಾಗದೆ.. ಚಡಪಡಿಸುತ್ತಾ ಯೋಗಿ ಪಡೆದದ್ದು ಯೋಗಿಗೆ ಜೋಗಿ [ಪಡೆದದ್ದು ಜೋಗಿಗೆ ಅಂತ ಹೇಳುತ್ತಾ ಹೇಳುವ ಆ ದೃಶ್ಯ ಅಮೋಘ..
ಪ್ರತ್ಯುತ್ತರಅಳಿಸಿಹಾಗೆಯೇ ಪ್ರತಿಯೊಬ್ಬರ ಪ್ರೀತಿ ಪ್ರೇಮ ವಿಶ್ವಾಸ ತೋರುವ ಪರಿ ಕೂಡ.. ಕೆಲವರದ್ದು ಹುಲಿ ಮುದ್ದು ಕೆಲವರದ್ದು ಕೋಗಿಲೆ ಮುದ್ದು.. ಆದರೆ ವಾತ್ಸಲ್ಯ ಮಾತ್ರ ಒಂದೇ..
ಪ್ರತಿಯೊಂದು ಲೇಖನವನ್ನು ಅಚ್ಚುಕಟ್ಟಾಗಿ ಹೆಣೆದು ಪಾತ್ರಗಳು ಈ ಕಥೆಗೆ ಮಾತ್ರವೇ ಸೃಷ್ಟಿಯಾಗಿದೆ ಎನ್ನುವ ರೀತಿಯಲ್ಲಿ ಬರೆಯುವ ನಿಮ್ಮ ತಾಕತ್ ಗೆ ನನ್ನ ಅಭಿನಂದನೆಗಳು.. ಪ್ರತಿಪಾತ್ರದಲ್ಲೂ ಭಾವ, ಅಭಾವ, ಸರಳತೆ, ವಿರಳತೆ ತಂದು ಕೂರಿಸುವ ನೀವು ನಿಜಕ್ಕೂ ಓದುಗರ ಮನದೊಳಗೆ ಲೇಖನವನ್ನು ಬಿಚ್ಚಿಡುತ್ತೀರಿ..
ಸೂಪರ್ ನಿವಿ.. ಕಥೆಯ ಅಂತ್ಯ, ನಾಯಕಿಯ ಅರಿವಾದ ಮನಸ್ಸು ನಿಜಕ್ಕೂ ತುಳುಕಿತು ಅನ್ನುವ ಭಾವ ಸೂಪರ್
ತುಂಬಾ ಇಷ್ಟ ಆಯ್ತು...
ಪ್ರತ್ಯುತ್ತರಅಳಿಸಿಬರವಣಿಗೆಯಲ್ಲಿನ ಸಹಜತೆ...
ಕಥೆ ಹೇಳುವ ಸಹಜತೆ...
ಕಥೆಯೊಳಗಿನ ಸಹಜತೆ....... ಥ್ಯಾಂಕ್ಯೂ.........
ಪ್ರೀತಿಯ ಮಗ್ಗಲುಗಳು,,,, ಮರದ ಅಡಿಯ ನೆರಳಿನ ಭಾವ ಬಂತು, ಕಥೆಗಾಗಿ ಧನ್ಯವಾದಗಳು,,,, ಇದನ್ನು ಆರಿಸಿ ಎಫ್. ಬಿ ಯಲ್ಲಿ ಹಾಕಿದ ಪಲವಳ್ಳಿ ಸರ್ ಗೆ ಒಂದು, ಸಿಹಿ ಗುದ್ದು,,,
ಪ್ರತ್ಯುತ್ತರಅಳಿಸಿ